ಹುಬ್ಬಳ್ಳಿ: ‘ಸುಳ್ಯದಲ್ಲಿ ಬಿಜೆಪಿ ಕಾರ್ಯಕರ್ತ ಹತ್ಯೆಯಾಗಿದ್ದು, ಅವರದ್ದೇ ಸರ್ಕಾರದಲ್ಲಿ ಅವರಿಗೇ ರಕ್ಷಣೆ ಇಲ್ಲದಂತಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಗಳಾಗಿವೆ.’ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಹಿಂದೆ ಬೇರೆ ಬೇರೆ ಕಾರಣ ಇರಬಹುದು. ಏನೇ ಇದ್ದರೂ ತನಿಖೆಯಿಂದ ಅದು ಬಹಿರಂಗವಾಗಬೇಕು. ಪೊಲೀಸರಿಗೆ ಮುಕ್ತವಾಗಿ ತನಿಖೆ ನಡೆಸಲು ಅವಕಾಶ ನೀಡಬೇಕು’ ಎಂದು ಹೇಳಿದರು.
ಆ ಸಂದರ್ಭಗಳಲ್ಲೆಲ್ಲ ಅವರು ಪ್ರತಿಭಟನೆ ನಡೆಸಿ, ವೋಟ್ ಬ್ಯಾಂಕ್ ಮಾಡಿಕೊಳ್ಳುತ್ತಿದ್ದರು. ಇದೀಗ ಮೌನಕ್ಕೆ ಶರಣಾಗಿದ್ದಾರೆ. ಯಾವುದೇ ಗಲಾಟೆಗೆ ಮುಂದಾಗುತ್ತಿಲ್ಲ, ಅದು ನಮ್ಮ ಪುಣ್ಯ’ ಎಂದರು.