ಹುಬ್ಬಳ್ಳಿ: ನಾನು ಬ್ರಾಹ್ಮಣರು ಮುಖ್ಯಮಂತ್ರಿ ಆಗಬಾರದು ಎಂದು ಹೇಳಿಲ್ಲ. ಪೇಶ್ವೇ ಡಿಎನ್ಎದವರು ಮುಖ್ಯಮಂತ್ರಿ ಆಗಬಾರದು ಎಂದಿದ್ದೇನೆ. ಈಗಲೂ ನನ್ನ ಹೇಳಿಕೆಗೆ ನಾನು ಬದ್ದ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬ್ರಾಹ್ಮಣ ಸಿಎಂ ಕುರಿತು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಾಹ್ಮಣ ಸಿಎಂ ಹೇಳಿಕೆ ವಿಚಾರವಾಗಿ ಇಡೀ ಬ್ರಾಹ್ಮಣ ಸಮೂದಾಯ ನನ್ನ ವಿರುದ್ಧ ತಿರುಗಿ ಬಿದ್ದಿಲ್ಲ. ನನ್ನ ಪ್ರಶ್ನೆಗೆ ಯಾರೂ ಉತ್ತರ ಕೊಡುತ್ತಿಲ್ಲ. ಪೇಶ್ವೇ ಮೂಲಕ ಬಗ್ಗೆ ಪ್ರಶ್ನೇ ಮಾಡಿದ್ದೇನೆ. ಆ ಬಗ್ಗೆ ಉತ್ತರ ಕೊಡಬೇಕು. ಯಾವ ಸಮೂದಾಯದವರಾದರೂ ಮುಖ್ಯಮಂತ್ರಿ ಆಗಲಿ. ಆದರೇ ಪೇಶ್ವೆ ಡಿಎನ್ಎ ಇರೋರು ಆಗಬಾರದು ಎಂದು ತಿಳಿಸಿದರು.
ಸಿದ್ಧರಾಮಯ್ಯ ಅಲ್ಲ ಸುಳ್ಳಿನ ರಾಮಯ್ಯ:
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋಕೆ ಸಿದ್ಧರಾಮಯ್ಯ ಕಾರಣ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲಿಯೇ ಸರ್ಕಾರ ಪತನದ ಬಗ್ಗೆ ಮಾತನ್ನಾಡಿದ್ದರು. ಬಿಜೆಪಿ ಅಕ್ರಮ ಹೊರ ತಂದಿದ್ದು ನಾನು, ಸಿದ್ಧರಾಮಯ್ಯ ಅಲ್ಲ. ನಿಮ್ಮ ಯೋಗ್ಯತೆಗೆ ಸರಿಯಾದ ರೀತಿಯಲ್ಲಿ ಮಾತಮಾಡಿ ಸಿದ್ಧರಾಮಯ್ಯ. ಚೇರ್ ಗಾಗಿ ಕುತಂತ್ರದ ರಾಜಕಾರಣ ಮಾಡ್ತೀರಿ. ಬಿಜೆಪಿಯವರೂ ನನಗೆ ಸಿಎಂ ಸ್ಥಾನ ಕೊಡೋಕೆ ರೆಡಿಯಾಗಿದ್ರು. ನಾಚಿಗೆಯಾಗಬೇಕು ಸಿದ್ಧರಾಮಯ್ಯಗೆ. ಅವರು ಸಿದ್ದರಾಮಯ್ಯ ಅಲ್ಲ ಸುಳ್ಳಿನ ರಾಮಯ್ಯ ಎಂದು ಸಿದ್ಧರಾಮಯ್ಯ ವಿರುದ್ಧ ಹರಿಹಾಯ್ದ ಎಚ್.ಡಿ.ಕೆ ಕಿಡಿಕಾರಿದರು.
ಮುಂಬೈ ಕರ್ನಾಟಕ ಭಾಗದಲ್ಲಿ ಪಂಚ ರತ್ನ ಯಾತ್ರೆ:
ಮಾರ್ಚ್ 23 ರವರೆಗೆ ರಥ ಯಾತ್ರೆ ಮುಂದುವರಿಸ್ತೇನೆ. ಯಾತ್ರೆ ಮೂಲಕ ನಮ್ಮ ಯೋಜನೆ ಕುರಿತು ಜನತೆಗೆ ಮನವರಿಕೆ ಮಾಡಲು ಯಾತ್ರೆ ಮಾಡ್ತಿದ್ದೇನೆ. ಜನತೆಗೆ ಹೊಸ ಬದಲಾವಣೆ ತರಬೇಕೆಂದಿದೆ. ಇದು ಡಬಲ್ ಎಂಜಿನ್ ಸರ್ಕಾರವಲ್ಲಟ್ರಿಪಲ್ ಎಂಜಿನ್ ಸರ್ಕಾರ. ಆದರೆ ಮಹದಾಯಿ ವಿಚಾರದಲ್ಲಿ ಬಿಜೆಪಿ ಸಿಹಿ ಹಂಚಿ ಹಲವು ದಿನಗಳೇ ಆದವು. ಗೋವಾದಲ್ಲಿ ಬಿಜೆಪಿ ನಾಯಕರು ಕ್ಯಾತೆ ತೆಗೆದಿದ್ದಾರೆ. ಚುನಾವಣೆ ನೆಪದಲ್ಲಿ ಜನರನ್ನು ದಾರಿ ತಪ್ಪಿಸೋ ಯತ್ನ ನಡೆಸಿದ್ದಾರೆ ಎಂದು ಕುಟುಕಿದರು.
ಇನ್ನು ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್ ಶೋ ಬಡತನ ಓಡಿಸೋ ಕಾರ್ಯಕ್ರಮವಾ..? 14 ನೇ ಏರ್ ಶೋ ನಡೆಯುತ್ತಿದೆ. ಹಿಂದೆ ಇದನ್ನು ಮೋದಿ ಆರಂಭಿಸಿದ್ರಾ ?ಏರ್ ಶೋ ಗೆ ಬರೋದ್ರಿಂದ ಬಡತನ ನಿವಾರಣೆಯಾಗುತ್ತಾ ? ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.
ನಾನು ಮಹಾದಾಯಿ ನೀರಿನ ವಿಚಾರದಲ್ಲಿ ಕಾನೂನಾತ್ಮಕ, ತಾಂತ್ರಿಕ ದೋಷ ಸರಿಪಡಿಸಿಕೊಳ್ಳಲು ಹೇಳಿದ್ದೆ. ಆದ್ರೆ ಬಿಜೆಪಿ ಅವರು ಪ್ರಚಾರ ಆದ್ರೆ ಸಾಕು ಅಂದ್ರು. ಈಗಲೂ ಬಿಜೆಪಿ ನಾಯಕರು ಅದನ್ನೇ ಮಾಡ್ತಿದಾರೆ. ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅಂತಾರೆಯಾರಿಂದ ಆಗಿದೆ ಅನ್ಯಾಯ ?ನೀರಾವರಿ ಯೋಜನೆ ಹೆಸರಲ್ಲಿ ಈ ಭಾಗದ ನಾಯಕರೇ ದುಡ್ಡು ಹೊಡೆಯೋ ಕೆಲಸ ಮಾಡಿದ್ದಾರೆ. ಬಡವರ ಜೊತೆ ರಾಷ್ಟ್ರೀಯ ಪಕ್ಷಗಳ ಚೆಲ್ಲಾಟವಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.