ಹುಬ್ಬಳ್ಳಿ: ಸಿಎಂ ಬಸವರಾಜ್ ಬೊಮ್ಮಯಿ ತಮ್ಮ ಎರಡನೇ ಬಜೆಟ್ ಮಂಡನೆಯಲ್ಲಿ ಮಹದಾಯಿ ಯೋಜನೆಗೆ 1000 ಕೋಟಿ ರೂ. ಅನುದಾನ ಮೀಸಲಿಡಿಸುವುದಾಗಿ ಘೋಷಿಸಿದ್ದಾರೆ. ಆದರೆ ಒಂದು ತಿಂಗಳಲ್ಲಿ ಈ ಅನುದಾನ ಹೇಗೆ ಬಿಡುಗಡೆ ಮಾಡುತ್ತೀರಿ? ಬೊಮ್ಮಾಯಿ ಸುಳ್ಳು ಹೇಳಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರ ಬಜೆಟ್ ಮಂಡಿಸಲಿದೆ. ಮಹದಾಯಿ ಯೋಜನೆಯನ್ನ ನಾವೇ ಪೂರ್ಣಗೊಳಿಸುತ್ತೇವೆ ಎಂದರು
ನಮ್ಮ ಗೃಹ ಲಕ್ಷ್ಮಿ, ಗೃಹ ಜ್ಯೋತಿ ಯೋಜನೆಗಳನ್ನ ಕಾಪಿ ಮಾಡಲಾಗಿದೆ. ನಮ್ಮನ್ನು ಕಾಪಿ ಮಾಡಲು ಯತ್ನಿಸಿ ಅಲ್ಲಿಯೂ ವಿಫಲವಾಗಿದ್ದಾರೆ. ಕಾಪಿ ಮಾಡಲೂ ಜಾಣ್ಮ ಬೇಕು ಎಂ ಸುರ್ಜೇವಾಲ ಅವರು ವ್ಯಂಗ್ಯವಾಡಿದರು. ಇನ್ನು ಟಿಪ್ಪು ಮುಗಿಸಿದಂತೆ ಸಿದ್ದರಾಮಯ್ಯರನ್ನ ಮುಗಿಸಬೇಕೆಂಬ ಹೇಳಿಕೆ ವಿಚಾರವಾಗಿ ಸುರ್ಜೆವಾಲ ಮಾತನಾಡಿ,
ಬಿಜೆಪಿಯರದ್ದು ಏನಿದ್ದರೂ ಗೋಡ್ರೆ ಸಂಸ್ಕೃತಿ. ಗಾಂಧಿ ಕೊಂದ ಸಂಸ್ಕೃತಿ . ಅದೇ ಸಂಸ್ಕೃತಿ ಇಂದಿರಾಗಾಂಧಿ, ರಾಜೀವ್ ಗಾಂಧಿಯನ್ನೂ ಕೊಂದಿತ್ತು. ಪಂಜಾಬಿನ ಸರ್ದಾರ್ ಬೇನ್ ಸಿಂಗ್ ಅವರನ್ನೂ ಕೊಂದಿತು. ನೂರಾರು ಕಾರ್ಯಕರ್ತರು ಭಾರತ ಉಳಿವಿಗೆ ಜೀವ ತ್ಯಾಗ ಮಾಡಿದ್ದಾರೆ. ನಾವು ಮತ್ತೆ ಮತ್ತೆ ಜೀವ ತ್ಯಾಗಕ್ಕೆ ಸಿದ್ಧ. ನಾವು ವಿಧ್ವಂಸಕ ಕೃತ್ಯಕ್ಕೆ ಪ್ರೋತ್ಸಾಹ ನೀಡುವುದಿಲ್ಲ.
ಪ್ರೀತಿಯ ಸಂದೇಶ ಸಾರುವವರು ನಾವು. ಅಶ್ವತ್ಥನಾರಾಯಣರನ್ನ ಕೂಡಲೇ ಬಂಧಿಸಬೇಕು. ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ಆದರೆ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದ ಸುರ್ಜೇವಾಲ, ಚುನಾವಣೆಯಲ್ಲಿ ಸೋಲುತ್ತೇವೆ ಅಂತ ಈ ರೀತಿ ಹೇಳಿಸುತ್ತಿದ್ದಾರೆ ಎಂದರು.