ಧಾರವಾಡ: ನಗರದ ಜಿಲ್ಲಾ ಮಕ್ಕಳ ರಕ್ಷಣಾ ಕೇಂದ್ರದಲ್ಲಿದ್ದು, ವ್ಯಾಸಂಗ ಮಾಡುತ್ತಿರುವ ಮತ್ತು ಕೋವಿಡ್ ಸಮಯದಲ್ಲಿ ತಮ್ಮ ಪೋಷಕರನ್ನು ಕಳೆದುಕೊಂಡಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಬ್ಯಾಂಕ್ ವತಿಯಿಂದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಸಮ್ಮುಖದಲ್ಲಿ ಮಕ್ಕಳ ಶೈಕ್ಷಣಿಕ ವೆಚ್ಚಕ್ಕೆ ಆರ್ಥಿಕ ಬೆಂಬಲ ನೀಡಿ, 1,33,000 ರೂ.ಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆರ್.ಎಂ. ಕಂಟೆಪ್ಪಗೌಡರ, ಬೆಳಗಾವಿ ವಿಭಾಗದ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಬ್ಯಾಂಕ್ ಅಧಿಕಾರಿ ರವಿ.ಎಸ್. ಎನ್., ಬೆಳಗಾವಿ ವಿಭಾಗದ ಆಡಿಟ್ ಅಧಿಕಾರಿ ಪ್ರಕಾಶ ಜಿ. ಎನ್., ಧಾರವಾಡ ವಲಯ ವ್ಯವಸ್ಥಾಪಕ ಮಂಜಪ್ಪ ಎಚ್. ನಡುವಿನ, ಧಾರವಾಡ ಬ್ರ್ಯಾಂಚ ಮ್ಯಾನೇಜರ್ ಪರಮೇಶ ಸಿ. ಎಚ್. ಉಪಸ್ಥಿತರಿದ್ದರು.