ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ನಿವಾಸಕ್ಕೆ ಅನಾಮಧೇಯ ಪತ್ರಗಳು ಬರುತ್ತಿದ್ದು, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಹುಬ್ಬಳ್ಳಿ, ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಹಿಂದೆ ಇದೇ ರೀತಿ ಅನಾಮಧೇಯ ಪತ್ರಗಳು ಬಂದಾಗ ಧಾರವಾಡ ಉಪನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆದರೆ, ಇದುವರೆಗೂ ಯಾವುದೇ ರೀತಿಯ ಕ್ರಮ ಜರುಗಿಸಿಲ್ಲ. ಅಲ್ಲದೇ ಈ ರೀತಿಯ ಅನಾಮಧೇಯ ಪತ್ರಗಳು ಬಂದಾಗ ನಮ್ಮ ಮನೆಗೆ ನೀಡದಂತೆ ಅಂಚೆ ಇಲಾಖೆಯವರಿಗೆ ಸೂಚನೆ ನೀಡಬೇಕು.
ಈಗ ಚುನಾವಣೆ ಬಂದಿರುವುದರಿಂದ ಈ ರೀತಿಯ ಅನಾಮಧೇಯ ಪತ್ರಗಳು ಮತ್ತೆ ನಮ್ಮ ಬೆಂಗಳೂರು ಹಾಗೂ ಧಾರವಾಡ ನಿವಾಸಕ್ಕೆ ಬರುತ್ತಿದ್ದು, ಈ ಸಂಬಂಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಶಿವಲೀಲಾ ಕುಲಕರ್ಣಿ ಅವರು ಒತ್ತಾಯಿಸಿದ್ದಾರೆ.