ಧಾರವಾಡ: ಮಾರ್ಚ್ 12 ರಂದು ಧಾರವಾಡ ಐಐಟಿ ಕಟ್ಟಡದ ಹತ್ತಿರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಹಿರಂಗ ಸಭೆ ನಡೆಯುವ ಸ್ಥಳಕ್ಕೆ ಕುಂದಗೋಳ ಮತಕ್ಷೇತ್ರದ ಮುಖಂಡ ಬಸವರಾಜ ಕುಂದಗೋಳಮಠ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕರುಗಳಾದ ಸಿ.ಎಮ್. ನಿಂಬಣ್ಣವರ,ಅಮೃತ ದೇಸಾಯಿಯವರು ಸೇರಿ ಮೈದಾನದ ತಯಾರಿ ನೋಡಿ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿ, ನಾಳೆ ಎಲ್ಲ ಅಧಿಕಾರಿಗಳು ಹಾಗೂ ಪಕ್ಷದ ಪ್ರಮುಖರು ಸೇರಲು ನಿರ್ಧರಿಸಿದರು. ಈ ಸಂದರ್ಭದಲ್ಲಿ ಲಿಂಗರಾಜ ಪಾಟೀಲ, ಮಂಡಲ ಅಧ್ಯಕ್ಷರಾದ ಕಲ್ಮಶ ಬೇಲೂರು, ರುದ್ರಪ್ಪ ಅರಿವಾಳ, ರಾಜು ನರೇಗಲ್ ಸೇರಿದಂತೆ ಅನೇಕ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.