ಧಾರವಾಡ: ಐಐಟಿ ಉದ್ಘಾಟನೆ ಹಾಗೂ ರೈಲ್ವೆ ಪ್ಲಾಟ್ ಫಾರಂ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮೋದಿಯವರು ಆಗಮಿಸಿದ್ದು, ಬಹು ಬೇಡಿಕೆಯಾಗಿದ್ದ ಐಐಟಿಯ ಕಾರ್ಯಕ್ರಮ ನಾಡ ಗೀತೆಯಿಂದಲೇ ಆರಂಭಗೊಂಡಿತು.
ವೇದಿಕೆಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಂತೆಯೇ ಉದ್ಘಾಟನೆಗೆ ಮುನ್ನವೇ ನಾಡಗೀತೆಯ ಮೂಲಕ ರಾಜ್ಯಕ್ಕೆ ಗೌರವ ಸಲ್ಲಿಸಲಾಯಿತು. ವೇದಿಕೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವರಾದ ಶಂಕರಪಾಟೀಲ ಮುನೇನಕೊಪ್ಪ, ಗೋವಿಂದ ಕಾರಜೋಳ ಸೇರಿದಂತೆ ಇತರರು ಉಪಸ್ಥಿತರಿದ್ದರು.