ಧಾರವಾಡ: ಸರ್ಕಾರ ಜಾರಿಗೊಳಿಸಿರುವ ಸದಾಶಿವ ಆಯೋಗದ ವರದಿ ತಮಗೆ ತೃಪ್ತಿ ತಂದಿಲ್ಲ. ಇದರಿಂದ ತಮಗೆ ಅನ್ಯಾಯವಾಗಿದೆ ಎಂದು ಡೋಹರ ಕಕ್ಕಯ್ಯ ಸಮಾಜದ ಮುಖಂಡರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸದಾಶಿವ ಆಯೋಗ ವರದಿ ಜಾರಿಯಲ್ಲಿ ತಮ್ಮ ಸಮಾಜಕ್ಕೆ ಅನ್ಯಾಯವಾಗಿದೆ. ಈ ವರದಿ ಜಾರಿಯಿಂದಾಗಿ ತಮ್ಮ ಸಮಾಜಕ್ಕೆ ಸಿಗಬೇಕಿದ್ದ ಶೇ.6 ರಷ್ಟು ಮೀಸಲಾತಿ ಕೇವಲ ಶೇ.1 ರಷ್ಟು ಮಾತ್ರ ಸಿಗಲಿದೆ. ನಾವು ಕೂಡ ಈ ವರದಿ ಜಾರಿಯಾಗಲಿ ಎಂದು ಕಾಯುತ್ತಿದ್ದೆವು. ಆದರೆ, ಸರ್ಕಾರ ವರದಿ ಜಾರಿ ಮಾಡುವಲ್ಲಿ ಲೋಪವೆಸಗಿದೆ.
ಜನಗಣತಿ ಆಧಾರದ ಮೇಲೆ ನಮ್ಮ ಸಮಾಜಕ್ಕೆ ಶೇ. 1 ರಷ್ಟು ಮಾತ್ರ ಮೀಸಲಾತಿ ನೀಡಲಾಗಿದೆ. ನಮ್ಮ ಸಮಾಜ ಅಸ್ಪೃಶ್ಯರಲ್ಲಿ ಬರುತ್ತದೆ. ಆ ಆಧಾರದ ಮೇಲೆ ನಮಗೆ ಮೀಸಲಾತಿ ಸಿಗಬೇಕಿತ್ತು. ಈ ವರದಿ ಜಾರಿಯಲ್ಲಿ ಆಗಿರುವ ಲೋಪದಿಂದಾಗಿ ನಮ್ಮ ಸಮಾಜ ಚುನಾವಣೆ ಬಹಿಷ್ಕರಿಸಲಿದೆ. ರಾಜ್ಯದಾದ್ಯಂತ ನಮ್ಮ ಸಮಾಜ ಯಾವುದೇ ಪಕ್ಷಕ್ಕೆ ಬೆಂಬಲ ನೀಡದೇ ಚುನಾವಣೆ ಬಹಿಷ್ಕರಿಸಲಿದೆ.
ನಮ್ಮ ಸಮಾಜವನ್ನು ಹಿಂದೂ ಡೋಹರ ಎಂದು ಬರೆಯಬೇಕು. ಆದರೆ, ದ್ರಾವಿಡರು ಎಂದು ಬರೆಯಲಾಗುತಿದೆ. ಆದರಿಂದ ಚುನಾವಣೆ ಒಳಗಾಗಿಯೇ ಈ ಸಮಸ್ಯೆಗೆ ಸ್ಪಷ್ಟಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.