ಹುಬ್ಬಳ್ಳಿ: ಶಾಸಕ ಜಗದೀಶ ಶೆಟ್ಟರ್ ಅವರಿಗೆ ಹುಬ್ಬಳ್ಳಿ- ಧಾರವಾಡ ವಿಧಾನಸಭಾ ಸೆಂಟ್ರಲ್ ಕ್ಷೇತ್ರದಿಂದ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ, ಅವರ ಬೆಂಬಲಿಗರು ನಗರದ ಕೇಶ್ವಾಪುರದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಸರ್ವೋದಯ ವೃತ್ತದ ಬಳಿ ಜಮಾಯಿಸಿದ ಬೆಂಬಲಿಗರು, ಶೆಟ್ಟರ್ ಭಾವಚಿತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ಸಜ್ಜನ ರಾಜಕಾರಣಿಯಾದ ಶೆಟ್ಟರ್ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.
ಶಂಕರ ಸುಂಕದ, ಮಂಜುನಾಥ ಕೊಂಡಪಲ್ಲಿ, ವಿನಯ ಸಜ್ಜನವರ, ಚಿದು ನರಗುಂದ, ಎಸ್.ಎಚ್. ಚಲಮರದ ಶೇಖ, ಶಮೀರ ಕಾಟಾಪುರ, ಮುರಗೇಶ ಶೆಟ್ಟರ್ ಇದ್ದರು.