ಧಾರವಾಡ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಖಾದಿ ಕ್ಷೆತ್ರದಲ್ಲಿ ಸ್ಮರಣೀಯ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ ರಾಜ್ಯ ಸರಕಾರದಿಂದ ಪ್ರತಿ ವರ್ಷ ನೀಡುವ ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿಗೆ 2023ನೇ ಸಾಲಿಗಾಗಿ ಧಾರವಾಡ ಜಿಲ್ಲೆಯ ಗರಗ ಕ್ಷೇತ್ರೀಯ ಸಂಘ ಆಯ್ಕೆಯಾಗಿರುವುದು ನಮ್ಮ ಹೆಮ್ಮೆ ಹೆಚ್ಚಿಸಿದೆ. ಈ ಮೂಲಕ ಸಂಘವು ಧಾರವಾಡ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರಶಸ್ತಿ ಪುರಸ್ಕøತ ಗರಗ ಕ್ಷೇತ್ರೀಯ ಸಂಘದ ಅಧ್ಯಕ್ಷರನ್ನು ಗೌರವಿಸಿ, ಮಾತನಾಡಿದರು.
ಭಾರತದ ಸ್ವಾತಂತ್ರ್ಯ ಆಂದೋಲನ, ರಾಷ್ಟ್ರೀಯ ಚಳುವಳಿಗಳು ಮತ್ತು ಕರ್ನಾಟಕದ ಏಕೀಕರಣಕ್ಕೆ ಧಾರವಾಡ ಜಿಲ್ಲೆ ಅಪಾರವಾದ ಕೊಡುಗೆಯನ್ನು ನೀಡಿದೆ. ವಿಶೇಷವಾಗಿ ಖಾದಿ ಉದ್ಯಮ, ಖಾದಿ ಚಳುವಳಿಗೆ ಬೆನ್ನೆಲುಬಾಗಿ ನಿಂತಿದೆ. ಧಾರವಾಡ ತಾಲೂಕಿನ ಗರಗ ಕ್ಷೇತ್ರೀಯ ಸಂಘ ಮತ್ತು ಹುಬ್ಬಳ್ಳಿಯ ಬೆಂಗೇರಿ ಖಾದಿ ಕೇಂದ್ರಗಳು ಧಾರವಾಡ ಜಿಲ್ಲೆ ಮೂಲಕ ಕರ್ನಾಟಕ ಕೀರ್ತಿಯನ್ನು ರಾಷ್ಟ್ರ ಮಟ್ಟಕ್ಕೆ ಎತ್ತರಿಸಿವೇ ಎಂದು ಅವರು ಹೇಳಿದರು.
ಜಿಲ್ಲಾಡಳಿತವು ಖಾದಿ ರಾಷ್ಟ್ರಧ್ವಜಗಳನ್ನು ಖರೀದಿಸಿ, ಸ್ಮರಣಿಕೆ ಮಾಡಿ, ವಿತರಿಸುವ ಮೂಲಕ ಖಾದಿ ಕ್ಷೇತ್ರದಲ್ಲಿನ ಸಂಘಗಳನ್ನು ಪೆÇ್ರೀತ್ಸಹಿಸುತ್ತಿದೆ. ಪ್ರತಿಯೊಬ್ಬರು ಖಾದಿ ವಸ್ತ್ರಗಳನ್ನು ಖರೀದಿಸುವ ಮೂಲಕ ಖಾದಿ ಉತ್ಪಾದನಾ ಕ್ಷೇತ್ರಕ್ಕೆ ಬೆಂಬಲ ನೀಡಬೇಕೆಂದು ಅವರು ತಿಳಿಸಿದರು.
ಗರಗ ಕ್ಷೇತ್ರೀಯ ಸಂಘದ ಅಧ್ಯಕ್ಷ ಬಸವಪ್ರಭು ಹೋಸಕೇರಿ ಅವರು ಗೌರವ ಸ್ವೀಕರಿಸಿ ಮಾತನಾಡಿ, ಖಾದಿಯನ್ನು ಒಂದು ಬಟ್ಟೆಯಾಗಿ ನೋಡದೆ, ಅದನ್ನು ಜೀವನ ಕ್ರಮವಾಗಿ ಸ್ವೀಕರಿಸಬೇಕು. ಖಾದಿಯು ಪರಿಸರ ಪ್ರೀಯ, ಗ್ರಾಮೀಣ ಗುಡಿ ಕೈಗಾರಿಕೆಯಾಗಿದೆ. ಸ್ಥಳೀಯ ಸಂಪನ್ಮೂಲಗಳಿಂದ ಇದು ಬೆಳೆಯುತ್ತದೆ. ಖಾದಿ ಉತ್ಪನ್ನಗಳ ದರವನ್ನು ಸರಕಾರವೇ ನಿರ್ಧರಿಸುವದರಿಂದ ಖಾದಿ ಉದ್ಯಮದ ಎಲ್ಲ ಶ್ರಮಿಕರಿಗೆ ಆದಾಯ ಹಂಚಿಕೆ ಆಗುತ್ತದೆ ಎಂದು ಅವರು ಹೇಳಿದರು.
ರಾಜ್ಯ ಸರಕಾರವು ಗರಗ ಕ್ಷೇತ್ರೀಯ ಸಂಘವನ್ನು ಗುರುತಿಸಿ, ಗೌರವಕ್ಕೆ ಆಯ್ಕೆ ಮಾಡಿದ್ದು, ಸಂತಸ ತಂದಿದೆ. ಖಾದಿ ಉಳಿದು, ಬೆಳೆದು ಬರಲು ಸಾರ್ವಜನಿಕರ ಮತ್ತು ಸರಕಾರದ ಬೆಂಬಲ, ಪೆÇ್ರೀತ್ಸಾಹದ ಅಗತ್ಯವಿದೆ ಎಂದು ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೋಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಲ್ಲಾ ಖಾದಿ ಮತ್ತು ಗ್ರಾಮದ್ಯೋಗ ಅಧಿಕಾರಿ ನಾಗನಗೌಡ ನೆಗಳೂರ ಇದ್ದರು. ಸಹಾಯಕ ವಾರ್ತಾಧಿಕಾರಿ ಡಾ.ಸುರೇಶ ಹಿರೇಮಠ ವಂದಿಸಿದರು.