News Karnataka Kannada
Friday, March 29 2024
Cricket
ಕ್ಯಾಂಪಸ್

ಬಡತನಕ್ಕೆ ಸವಾಲು ಎಸೆದು ಯುಪಿಎಸ್‌ಸಿ ಪರೀಕ್ಷೆ ತೇರ್ಗಡೆಯಾದ ಸಿದ್ದಲಿಂಗಪ್ಪ

Siddalingappa clears UPSC examby challenging poverty
Photo Credit : News Kannada

ಧಾರವಾಡ : ಬಡತನದಲ್ಲಿ ಬೆಂದಿದ್ದ ವ್ಯಕ್ತಿ ಇದೀಗ ಧಾರವಾಡಕ್ಕೆ ಕೀರ್ತಿ ತಂದ ಯುವಕ. ಈತ ಇತ್ತ ಕುಟುಂಬಕ್ಕೆ ನೆರವಾಗಿ ತನ್ನ ವಿದ್ಯಾಭ್ಯಾಸಕ್ಕೆ ಮನಸ್ಸು‌ ಕೊಟ್ಟು ಎಲ್ಲರ ಬಾಯಿಯಲ್ಲಿ ಶಯಬ್ಬಾಸ್ ಅನಿಸ್ಸಿಕೊಂಡಿದ್ದಾರೆ. ಮನಸ್ಸಿದ್ದರೆ ಮಾರ್ಗ ಎಂಬುವುದಕ್ಕೆ ಸಿದ್ದಲಿಂಗಪ್ಪ ಪೂಜಾರ ಸೂಕ್ತ ಉದಾಹರಣೆ. ಬಡತನಕ್ಕೆ ನಾಚಿಕೆ ಬರುವಂತೆ ವಿದ್ಯಾಭ್ಯಾಸ ಮಾಡಿ ಎಲ್ಲರಿಗೂ ಮಾರ್ಗದರ್ಶನವಾಗಿದ್ದಾನೆ.

ಪ್ರತಿಭಾವಂತ ವಿದ್ಯಾರ್ಥಿ ಸಿದ್ದಲಿಂಗಪ್ಪ ಪೂಜಾರ ಧಾರವಾಡ ತಾಲೂಕಿನ ಅಣ್ಣಿಗೇರಿ ಪಟ್ಟಣದ ನಿವಾಸಿ. 589 ಅಂಕಗಳನ್ನು ಪಡೆಯುವ ಮೂಲಕ ಯುಪಿಎಸ್‌ಸಿ ಎಕ್ಸಾಮ್ ನಲ್ಲಿ ತೇರ್ಗಡೆಯಾಗಿ ರಾಜ್ಯಕ್ಕೆ ಮತ್ತು ಅಣ್ಣಿಗೇರಿ ಪಟ್ಟಣಕ್ಕೆ ಕೀರ್ತಿ ತಂದಿದ್ದಾನೆ. ಇನ್ನೂ ಇವನ ಸಾಧನೆಗೆ ಅಣ್ಣಿಗೇರಿ ಪಟ್ಟಣವೇ ಹೆಮ್ಮೆ ಪಡುವಂತಾಗಿದೆ.

ಸಿದ್ದಲಿಂಗಪ್ಪ ಬಿ ಇ‌ ಎಲೆಕ್ಟ್ರಾನಿಕ್ಸ್ ಮುಗಿಸಿ ಬೆಂಗಳೂರಿನ ಖಾಸಗಿ‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಮದುವೆಯಾಗಿರುವ ಸಿದ್ದಲಿಂಗಪ್ಪ ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.ಕನ್ನಡ ಮಾಧ್ಯಮದಲ್ಲಿ ಓದಿರೋ ಸಿದ್ದಲಿಂಗಪ್ಪ ಅವರು ಬಡತನದಲ್ಲಿ ಓದಿ ದೇಶದ ಅತ್ಯುನ್ನತ ಪರೀಕ್ಷೆ ಪಾಸ್ ಮಾಡಿದ್ದಾರೆ.

ತಾಯಿ ಹೊಲಮನಿ‌ ಕೆಲಸ ಮಾಡುತ್ತೀದ್ದಾರೆ. ತಂದೆ ಕೆಎಸ್ಸಾರ್ಟಿಸಿ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಗನ ಸಾಧನೆಗೆ ತಾಯಿಗೆ ಮಾತು ಬರದಂತಾಗಿದೆ. “ಒಟ್ಟು ವಿದ್ಯಾಭ್ಯಾಸ ಮಾಡುತ್ತೀದ್ದಾ ಅದು ಎನ್ನು ಓದುತ್ತೀದ್ದಾ ನನ್ನಗೂ ಗೊತ್ತಿಲ್ಲಾ, ಆದ್ರೆ ತುಂಬಾ ಸಂತೋಷ ವಾಗಿದೆ. ದೊಡ್ಡ ಪರೀಕ್ಷೆ ಬರೆದು ಹುಬ್ಬಳಿ ಧಾರವಾಡ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ನಮ್ಮ ಮಗ ಅತ್ಯಂತ ದೊಡ್ಡ ಪರೀಕ್ಷೆಯಲ್ಲಿ ಪಾಸ ಆಗಿದ್ದಾನೆ. ಅವನು ಇಷ್ಟು ದೊಡ್ಡ ಪರೀಕ್ಷೆಯಲ್ಲಿ ಪಾಸ್ ಆಗುತ್ತಾನೆ ಎಂದು ನಿರೀಕ್ಷೆ ಇರಲಿಲ್ಲ ” ಎಂದು ಮಗನ ಸಾಧನೆ ತಾಯಿ ಖುಷಿ ಹಂಚಿಕೊಂಡಿದ್ದಾರೆ

ಸಿದ್ದಲಿಂಗಪ್ಪ ಅವರದ್ದು ಬಡ ಕುಟುಂಬ. ಈಗಲೂ ತಗಡಿನ ಶೆಡ್ಡಿನ ಮನೆಯಲ್ಲಿಯೇ ವಾಸವಾಗಿದ್ದಾರೆ. ಸಿದ್ದಲಿಂಗಪ್ಪ IAS ಪಾಸ್ ಆಗಿದಕ್ಕೆ ಇಡೀ ಏರಿಯಾದ ಜನರು ಸಿದ್ದಲಿಂಗಪ್ಪ ತಾಯಿಗೆ ಸಕ್ಕರೆ ನೀಡಿ ಶುಭಾಶಯ ಕೋರಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು