ಧಾರವಡ: ಭಾರತ ಸರ್ಕಾರದ ಸೂಚನೆಯಂತೆ ಭಾರತದ ವಿವಿಧ ವೈದ್ಯಕೀಯ ಸಂಸ್ಥೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ದಿನಾಂಕ 01.10.2023 ರಂದು ಸ್ವಚ್ಛತಾ ಅಭಿಯಾನವನ್ನು ಮಾಡಲು ಸೂಚಿಸಿದ್ದರನ್ವಯ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್) ಯಲ್ಲಿ “ಸ್ವಚ್ಛತಾ ಹಿ ಸೇವಾ” ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಡಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕರಾದ ಡಾ.ಮಹೇಶ ದೇಸಾಯಿ ರವರು ಮತ್ತು ಈ ಕಾರ್ಯಕ್ರದಲ್ಲಿ ಭಾಗವಹಿಸಿದ ಎಲ್ಲರೂ “ಸ್ವಚ್ಛತಾ ಹಿ ಸೇವಾ” ಕಾರ್ಯಕ್ರಮದ ಪ್ರತಿಜ್ಞೆಯನ್ನು ತೆಗೆದುಕೊಂಡರು.
ಡಿಮ್ಹಾನ್ಸ್ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರೂ ಸ್ವಚ್ಚತೆಗೆ ಆದ್ಯತೆಯನ್ನು ಕೊಡುವುದರ ಜೊತೆಗೆ ಬೇರೆಯವರಿಗೂ ಕೂಡ “ಸ್ವಚ್ಛತಾ ಹಿ ಸೇವಾ” ಕಾರ್ಯಕ್ರಮದ ಮಾಹಿತಿಯನ್ನು ತಿಳಿಸಬೇಕೆಂದರು. ಮಹತ್ಮಾ ಗಾಂಧೀಜಿಯವರು ಸ್ವಚ್ಛ ಭಾರತದ ಕನಸನ್ನು ಕಂಡಿದ್ದರು ಇದನ್ನು ನನಸು ಮಾಡಲು ಪ್ರತಿಯೊಬ್ಬರು ಕೈಜೋಡಿಸಬೇಕೆಂದು ತಿಳಿಸಿದರು.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಕ್ರಿಯಾಶೀಲರಾಗಿ ಭಾಗವಹಿಸಬೇಕೆಂದು ಸಲಹೆ ನೀಡಿದರು. ಡಿಮ್ಹಾನ್ಸ್ ಸಂಸ್ಥೆಯ ಆವರಣದಲ್ಲಿ ಎಲ್ಲರೂ ಕೂಡಿ ವಿವಿಧ ಸ್ಥಳಗಳಲ್ಲಿ ಕಸ, ಪ್ಲಾಸ್ಟಿಕ್ ವಸ್ತುಗಳನ್ನು ಹಾಗೂ ಅನುಪಯುಕ್ತ ಚಿಕ್ಕ ಮುಳ್ಳುಗಿಡಗಳನ್ನು ತೆಗೆದರು.
ಈ “ಸ್ವಚ್ಛತಾ ಹಿ ಸೇವಾ” ಕಾರ್ಯಕ್ರಮದಲ್ಲಿ ಡಿಮ್ಹಾನ್ಸ್ ಸಂಸ್ಥೆಯ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ.ರಾಘವೇಂದ್ರ ನಾಯಕ್, ಸೈಕಿಯಾಟ್ರಿಕ ನಸಿರ್ಂಗ್ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ.ಆರ್.ಶ್ರೀವಾಣಿ, ಸಂಸ್ಥೆಯ ಸಹಾಯಕ ಆಡಳಿತಾಧಿಕಾರಿಯಾದ ಶ್ರೀಮತಿ ವಿಜಯಲಕ್ಷ್ಮೀ ತೊರಗಲ್‍ಮಠ, ನಸಿರ್ಂಗ್ ಅಧೀಕ್ಷರಾದ ಶ್ರೀಮತಿ ಗಾಯತ್ರಿ ಶಿಂಧೆ, ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗದ ಸಿಬ್ಬಂದಿಗಳಾದ ಶ್ರೀ ಅನಂತರಾಮು ಬಿ.ಜಿ, ಶ್ರೀ ಅಶೋಕ ಕೋರಿ, ಶ್ರೀ ಆರ್.ಎಮ್.ತಿಮ್ಮಾಪೂರ, ಶುಶ್ರೂಷಕ ಅಧಿಕಾರಿಗಳಾದ (ನಸಿರ್ಂಗ್ ಆಫಿಸರ್ಸ) ಶ್ರೀಮತಿ ಡೆಲಿಮಾ ಪವನ್, ಶ್ವೇತಾ ಹೆಗಡೆ, ಪಾರ್ವತಿ ಕೆಂಗಣ್ಣನವರ್, ಐರಿನ್ ಡಿಸೋಜಾ, ಪ್ರಶಾಂತ್ ಬೇವೂರು, ಪ್ರಶಾಂತ ಪಾಟೀಲ್, ಮಹ್ಮದ್ ಜೂಬೇರ್ ಬಿ, ಸರಫರಾಜ್ ಯಕ್ಕುಂಡಿ, ಮಹಂತಯ್ಯ ಅರವಟಗಿಮಠ, ಮಂಜುನಾಥ ಬಿ, ಬಾಳಪ್ಪ ಪೂಜಾರ್, ಮಹ್ಮದ್ ಶಫಿಉಲ್ಲಾ, ಸುರೇಶ್ ಪೂಜಾರ್, ಇಸಾಕ್ ಮಾಣಿಕ್, ಹನುಮಂತ್ ಮುದೆವಗೋಳ್, ರೇವತಿ ಎಮ್, ಲವ್ಲಿ ಮ್ಯಾಥ್ಯೂವ್ಸ್, ಸವಿತಾ ಘೋರ್ಪಡೆ, ಸಂಗೀತಾ, ಅನಿತಾ ಜಿ.ಬಿ, ಕಸ್ತೂರಿ ಕಮ್ಮಾರ್, ಸರಸ್ವತಿ ಅಯ್ಯನಗೌಡರ್, ಜ್ಯೋತಿ ಕೆ.ಎಸ್, ಇತರ ಶುಶ್ರೂಷಕ ಅಧಿಕಾರಿಗಳು ಹಾಗೂ ವಿವಿಧ ವಿಭಾಗದ ಸಿಬ್ಬಂದಿಗಳು, ನಸಿರ್ಂಗ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಎಂ.ಡಿ.ಸೈಕಿಯಾಟ್ರಿ ವಿದ್ಯಾರ್ಥಿಗಳು ಏಜನ್ಸಿ ಸಿಬ್ಬಂದಿವರ್ಗದವರು, ಸೆಕ್ಯುರಿಟಿ ಸಿಬ್ಬಂದಿ ವರ್ಗದವರು ಹಾಗೂ ಇತರರು ಭಾಗವಹಿಸಿದ್ದರು.