News Kannada
Friday, March 01 2024
ಹುಬ್ಬಳ್ಳಿ-ಧಾರವಾಡ

ಮಹಾದಾಯಿ ವಿಚಾರ, ಕೇಂದ್ರ ಸಚಿವ ಜೋಶಿ ಅವರನ್ನ ನಾವು ಬಿಡೋದಿಲ್ಲ; ಶಾಸಕ ಕೋನರೆಡ್ಡಿ

We will not spare Union Minister Joshi on Mahadayi issue; MLA Konareddy
Photo Credit : Facebook

ಹುಬ್ಬಳ್ಳಿ: ಕಾವೇರಿ ಕೃಷ್ಣ ಎರಡು ಕಣ್ಣು ಇದ್ದಾಗೆ, ಕರ್ನಾಟಕದಲ್ಲಿ ನೀರು ಇಲ್ಲದೇ ಇದ್ದಾಗ ತಮಿಳುನಾಡು, ಆಂಧ್ರಪ್ರದೇಶಗಳು ನೀರು ಕೊಡಿ ಅಂತ ಕೇಳ್ತಾರೆ.  ನಮಗೇ ನೀರು ಇಲ್ಲಾ, ನಿಮಗೆ ಹೇಗೆ ಕೊಡೋದು ಅಂತ ಹೇಳುವ ಕೆಲಸ ಸರ್ಕಾರ ಮಾಡ್ತಾ ಇದೆ ಎಂದು ಶಾಸಕ ಎನ್ ಹೆಚ್ ಕೋನರಡ್ಡಿ ಹೇಳಿದರು.

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನ್ಯಾಯಾಧೀಶರು ಹಾಗೂ ಆದೇಶ ಮಾಡಿದ ಬೋರ್ಡ್ ಗೆ ಇಲ್ಲಿ ನೀರು ಇದೆಯಾ ಇಲ್ವಾ ಅಂತ ಚೆಕ್ ಮಾಡಿ, ಮೊದಲೇ ನೀರು ನಮಗಿಲ್ಲ, ಕಾವೇರಿ ನೀರು ಕೇಳಿದ್ರೆ ನಮ್ಮ ರೈತರು ಏನು ಮಾಡಬೇಕು? ನಮ್ಮ ರೈತರು ಎಲ್ಲಾ ಕಡೆ ಹೋರಾಟ ಮಾಡ್ತಾ ಇದ್ದಾರೆ. ಕಲ್ಲು ತಲೆ ಮೇಲೆ ಇಟ್ಟುಕೊಂಡು ಹೋರಾಟ ಮಾಡ್ತಾ ಇದ್ದಾರೆ. ನೀರೇ ಇಲ್ಲದಾಗ ನ್ಯಾಯಾಲಯದ ಆದೇಶ ಹೇಗೆ ಪಾಲಿಸಬೇಕು?ಇದು ಗಂಭೀರ ಸಮಸ್ಯೆ ಇದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಿಯೋಗ ಮಾಡಿ ಪ್ರಧಾನ ಮಂತ್ರಿಗಳಿಗೆ ಮನವರಿಕೆ ಮಾಡ್ತಾ ಇದ್ದಾರೆ ಎಂದರು.

ಇನ್ನು ಮಹದಾಯಿ ವಿಚಾರವಾಗಿ, ಕೃಷ್ಣ ಕಣಿವೆ ರಾಷ್ಟ್ರೀಯ ಯೋಜನೆ ಅಂತ ಘೋಷಣೆ ಮಾಡಬೇಕು, ರಾಜ್ಯ ಸರ್ಕಾರ ಮೂಲಭೂತ ಅಂಕಿ ಅಂಶ ಎಲ್ಲಾ ಕೊಟ್ಟಾಗಿದೆ. ತುಂಗಾ ರಾಷ್ಟಿಯ ಯೋಜನೆ ಅಂತ ಘೋಷಣೆ ಮಾಡಿದ್ದಾರೆ. ಮಹದಾಯಿ ಆಗೇ ಬಿಟ್ಟಿದೆ ಅಂತ ಬಿಜೆಪಿ ಅವರು ವಿಜಯೋತ್ಸವ ಮಾಡಿದ್ರು. ಈಗ ಅವರೇ ಉತ್ತರ ಹೇಳ್ತಿಲ್ಲ, ಜೋಶಿ ಸಾಹೇಬ್ರನ್ನ ನಾವು ಬಿಡೋದೇ ಇಲ್ಲಾ, ನೀವು ಮಾಡ್ಲೆ ಬೇಕು ಅಂತ ಬೆನ್ನು ಬೀಳ್ತಿವಿ.‌ ಮಹದಾಯಿ ಜಾರಿ ಆಗುವವರೆಗೂ ಹೋರಾಟ ನಿರಂತರ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು