News Kannada
Sunday, September 24 2023
ಹಾವೇರಿ

ಅಪರಾಧಿಗೆ ಶಸ್ತ್ರಾಸ್ತ್ರ ಒದಗಿಸಿದ ಆರೋಪ: ಆರೋಪಿಗಳ ಬಂಧನ

Doctor who applied for online loan had a terrible experience: What is in her complaint to police
Photo Credit :

ಹಾವೇರಿ: ಬಿಹಾರದ ಎಸ್‌ಟಿಎಫ್ ಕರ್ನಾಟಕ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸುವ ಮೂಲಕ ಮುಂಗೇರ್‌ನಿಂದ ಮೂವರು ಕುಖ್ಯಾತ ಕ್ರಿಮಿನಲ್‌ಗಳನ್ನು ಬಂಧಿಸಿದೆ. ಮೊಹಮ್ಮದ್ ಶಂಶಾದ್ ಆಲಂ, ಮೊಹಮ್ಮದ್ ಶಾಹಿದ್ ಚಂದ್ ಮತ್ತು ಮೊಹಮ್ಮದ್ ಆಸಿಫ್ ಆಲಂ ಬಂಧಿತರು.

ಅಪರಾಧಿಗೆ ಶಸ್ತ್ರಾಸ್ತ್ರ ಒದಗಿಸಿದ ಆರೋಪದ ಹಿನ್ನೆಲೆ ಈ ಮೂವರ ವಿರುದ್ಧ ಎಪ್ರಿಲ್19 ರಂದು ಕರ್ನಾಟಕದ ಹಾವೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಮೂವರೂ ಕ್ರಿಮಿನಲ್ ಮಂಜುನಾಥ್ ಅಲಿಯಾಸ್ ಮಲಿಕ್​ ಎಂಬುವನಿಗೆ ಕರ್ನಾಟಕದಲ್ಲಿ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದರು ಎಂದು ಆರೋಪಿಸಲಾಗಿದೆ. ಹಾವೇರಿಯಲ್ಲಿ ಉದ್ಯಮಿ ಬಸಂತ್ ಕುಮಾರ್ ಮೇಲೆ ಕುಖ್ಯಾತ ಪಾತಕಿಗಳಾದ ಮಂಜುನಾಥ್ ಮತ್ತು ಸೋನು ಮಲಿಕ್ ಗುಂಡಿನ ದಾಳಿ ನಡೆಸಿದ್ದರು.

ಸುದೀರ್ಘ ಹುಡುಕಾಟ:

ಮೂವರು ಅಪರಾಧಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಕರ್ನಾಟಕದ ಪೊಲೀಸರು ಬಿಹಾರ ಪೊಲೀಸರನ್ನು ಸಂಪರ್ಕಿಸಿದ್ದರು. ಅವರ ಬಂಧನಕ್ಕಾಗಿ ಎಸ್‌ಟಿಎಫ್‌ನ ವಿಶೇಷ ತಂಡ ಶೋಧ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

See also   ರಾಣೆಬೆನ್ನೂರು : 2 ಕಾರುಗಳ ನಡುವೆ ಅಪಘಾತ 4 ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು