NewsKarnataka
Wednesday, December 08 2021

ಹಾವೇರಿ

ನಗರದಲ್ಲಿ ಬೀದಿ ನಾಯಿಗಳ ಉಪಟಳ ಜನಸಾಮಾನ್ಯರಿಗೆ ತೊಂದರೆ

ಹಾವೇರಿ: ನಗರದ ವಿವಿಧೆಡೆ ಬೀದಿ ನಾಯಿಗಳ ಉಪಟಳ ತೀವ್ರ ಹೆಚ್ಚಾಗಿದ್ದು, ಜನ ಸಾಮಾನ್ಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟಕರವಾಗಿದೆ. ಹಗಲು, ರಾತ್ರಿ ಎನ್ನದೆ ಬೀದಿ ನಾಯಿಗಳು ನೀಡುತ್ತಿರುವ ಕಾಟದಿಂದ ವಾಹನ ಸವಾರರು, ಪಾದಚಾರಿಗಳು ದಿನನಿತ್ಯ ತೊಂದರೆ ಅನುಭವಿಸುವಂತಾಗಿದೆ.

ನಗರದ ಪ್ರಮುಖ ಸ್ಥಳಗಳಾದ ಸುಭಾಸ್‌ ವೃತ್ತ, ಮಾಗಾವಿ ಟಾಕೀಸ್‌, ಹುಕ್ಕೇರಿ ಮಠ, ಹೊಸಮನಿ ಸಿದ್ಧಪ್ಪ ವೃತ್ತ, ಕೇಂದ್ರೀಯ ಬಸ್‌ ನಿಲ್ದಾಣ, ಎಸ್‌ಎಂಎಸ್‌ ಕಾಲೇಜು, ಗೆಳೆಯರ ಬಳಗ ಸ್ಕೂಲ್‌, ದುಂಡಿ ಬಸವೇಶ್ವರ ವೃತ್ತ, ಡಿಸಿ ಆಫೀಸ್‌ ರೋಡ್, ಜಿ. ಎಚ್‌ ಕಾಲೇಜ್‌, ಎಂ. ಜಿ. ರಸ್ತೆ, ರೈಲ್ವೆ ಸ್ಟೇಷನ್‌, ಕಲ್ಲು ಮಂಟಪ ರಸ್ತೆ, ಪಿ. ಬಿ. ರಸ್ತೆ, ಕಾಗಿನೆಲೆ ರಸ್ತೆ, ಜೆ. ಪಿ. ವೃತ್ತ, ಮಹಾತ್ಮ ಗಾಂಧಿ ವೃತ್ತ, ಜಿಲ್ಲಾ ಕ್ರೀಡಾಂಗಣ, ಇಜಾರಿಲಕಮಾಪುರ ಸೇರಿದಂತೆ ಜನದಟ್ಟಣೆ ಹಾಗೂ ವಾಹನ ದಟ್ಟಣೆ ಹೆಚ್ಚಾಗಿರುವ ಸ್ಥಳಗಳಲ್ಲಿ ದಿನದಿಂದ ದಿನಕ್ಕೆ ನಾಯಿಗಳ ದಂಡು ಹೆಚ್ಚುತ್ತಲೇ ಇವೆ. ಹಾಗಾಗಿ ಬೀದಿ ನಾಯಿಗಳ ನಿಯಂತ್ರಣದ ಬಗ್ಗೆ ನಗರಸಭೆ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸವಾರರನ್ನು ಬೆನ್ನತ್ತುವ ನಾಯಿಗಳು: ನಗರದ ಗಲ್ಲಿ ಗಲ್ಲಿಗಳಲ್ಲಿ ತಿರುಗಾಡುತ್ತಿರುವ ಬೀದಿ ನಾಯಿಗಳ ಹಿಂಡು ವಾಹನ ಸವಾರರ ಮೇಲೆ ದಾಳಿ ಮಾಡುತ್ತವೆ. ಕೆಲ ನಾಯಿಗಳು ಬೈಕ್‌, ಕಾರುಗಳ ಹಿಂದೆ ಓಡಿ ಬರುತ್ತಿರುವ ಪರಿಣಾಮ ವಾಹನ ಸವಾರರು ಎಲ್ಲಿ ಕಚ್ಚುತ್ತವೆಯೋ ಎಂಬ ಭಯದಿಂದ ಓಡಾಡುವಂತಾಗಿದೆ.

ಚಿಕ್ಕ ಮಕ್ಕಳು ಶಾಲೆಗೆ ಹೋಗಬೇಕಾದರೆ, ವೃದ್ಧರು, ಮಹಿಳೆಯರು, ವಿಶೇಷ ಚೇತನರು ಸಂಚಾರ ಮಾಡಬೇಕಾದರೆ ತೊಂದರೆ ನೀಡುತ್ತಿವೆ. ಇದರಿಂದ ಕಾಲೋನಿಗಳಲ್ಲಿ ಒಬ್ಬೊಬ್ಬರೇ ಓಡಾಡಲು ಹಿಂದೇಟು ಹಾಕುವಂತಾಗಿದೆ. ಇನ್ನು ರಾತ್ರಿ ವೇಳೆ ವಾರ್ಡ್‌, ಕಾಲೊನಿಗಳಲ್ಲಿ ನಾಯಿಗಳು ಕರ್ಕಶವಾಗಿ ಬೊಗಳುವುದರಿಂದ ನಗರವಾಸಿಗಳ ನಿದ್ದೆಗೆಡಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!