ವಿಜಯಪುರ: ಇಲ್ಲಿನ ಕೃಷ್ಣಾ ನದಿಗೆ ಬಾಗಿನ ಅರ್ಪಿಸಲು ಶನಿವಾರ ಆಲಮಟ್ಟಿಗೆ ಆಗಮಿಸಿದ ತಮಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಗೌರವ ವಂದನೆ ಆಯೋಜಿಸಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗರಂ ಆದರು.
ಈ ಸಂಬಂಧ ಬೆಳಗಾವಿ ಉತ್ತರ ವಲಯ ಸತೀಶ್ ಕುಮಾರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ‘ಗೌರವ ವಂದನೆ ಏರ್ಪಡಿಸುವುದು ಬೇಡ ಎಂದು ಈ ಮೊದಲೇ ಸೂಚನೆ ನೀಡಿರಲಿಲ್ಲವೇ? ನಿಮ್ಮ ಕಿರಿಯ ಸಿಬ್ಬಂದಿಗೆ ಈ ಕುರಿತು ಮಾಹಿತಿ ನೀಡಿರಲಿಲ್ಲವೇ? ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಬಳಿ ಎಸ್‌ಪಿ ಮತ್ತು ಐಜಿಪಿ ಕ್ಷಮೆಯಾಚಿಸಿದರು.
ಪೋಲೀಸ್ ಇಲಾಖೆಯಿಂದ ಗೌರವ ವಂದನೆ ಆಯೋಜಿಸಿದ್ದಕ್ಕೆ ಮುಖ್ಯ ಮಂತ್ರಿ ಸಿಟ್ಟು
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.