ವಿಜಯಪುರ : ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಮಹಿಳೆಯೊಬ್ಬಳ ಮೇಲೆ ಜೀಪ್ ಹರಿಸಿ ಕೊಲೆ ಮಾಡಿರುವ ಅಮಾನವೀಯ ಘಟನೆ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ನಡೆದಿದೆ.
ಶೋಭಾ ಸೋಮನಿಂಗ ಮೊಗದರೆ (45) ಕೊಲೆಯಾದ ಮಹಿಳೆ. ಸಾಗರ ಖತಾರ ಮತ್ತು ಮಾರುತಿ ಥೋರತ ಕೊಲೆ ಮಾಡಿದ ಆರೋಪಿಗಳು. ಕಬ್ಬು ಕಟಾವು ಮಾಡಲು ಒಂದು ತಂಡವನ್ನು ಕರೆತರುತ್ತೇವೆ ಎಂದು ಕೊಲೆಯಾದ ಮಹಿಳೆಯ ಪತಿ ಸೋಮನಿಂಗನಿಂದ ಆರೋಪಿಗಳು 45 ಲಕ್ಷ ರೂ. ಹಣ ಪಡೆದಿದ್ದರು.
ಆರೋಪಿ ಮಾರುತಿ ಥೋರತ ಆರೋಪಿ ಸಾಗರ ಖತಾರ
ಹಣ ಪಡೆದ ಬಳಿವೂ ಆರೋಪಿಗಳ ಕಬ್ಬು ಕಟಾವು ಮಾಡುವ ತಂಡವನ್ನು ಕಳುಹಿಸಿರಲಿಲ್ಲ. ಈ ವಿಚಾರಕ್ಕೆ ಹಣ ನೀಡಿದ ಸೋಮನಿಂಗನಿಗೂ ಹಾಗೂಇಬ್ಬರು ಆರೋಪಿಗಳಿಗೂ ವಾಗ್ವಾದ ಆಗಿತ್ತು. ಈ ವೇಳೆ ಕೊಟ್ಟ ಹಣ ವಾಪಸ್ ಕೊಡುವಂತೆ ಕೇಳಿದ್ದಕ್ಕೆ ಕುಪಿತಗೊಂಡ ಆರೋಪಿಗಳು ಸೋಮನಿಂಗ ಇಲ್ಲದ ಸಮಯದಲ್ಲಿ ತೋಟಕ್ಕೆ ಬಂದಿದ್ದರು. ಈ ವೇಳೆ ಜೀಪ್‌ನಿಂದ ಬೆನ್ನಟ್ಟಿ, ಅಟ್ಟಾಡಿಸಿ ಜೀಪ್ ಹರಿಸಿ ಸೋಮನಿಂಗನ ಪತ್ನಿ ಶೋಭಾಳನ್ನು ಕೊಲೆ ಮಾಡಿದ್ದಾರೆ.
ಈ ಸಂಬಂಧ ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.