ಆಲಮಟ್ಟಿ: ಹಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ಸು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.
ಯಲಗೂರ ಕ್ರಾಸ್ ನಿಂದ ಆಲಮಟ್ಟಿ ಮಾರ್ಗವಾಗಿ ಬೆಂಗಳೂರಿಗೆ ತೆರಳುವ ಖಾಸಗಿ ಬಸ್ಸು ಮತ್ತು ಆಲಮಟ್ಟಿಯಿಂದ ಅಬ್ಬಿಹಾಳ ಗ್ರಾಮಕ್ಕೆ ಹೋಗುತ್ತಿದ್ದ ಬೈಕ್ ಗೆ ಬಸ್ಸು ಡಿಕ್ಕಿ ಹೊಡೆದಿರುವದರಿಂದ ಅಪಘಾತ ಸಂಭವಿಸಿದೆ.
ಮೃತರನ್ನು ನಿಡಗುಂದಿ ತಾಲ್ಲೂಕಿನ ಅಬ್ಬಿಹಾಳ ಗ್ರಾಮದ ಸುನೀಲ.ಮಲ್ಲಪ್ಪ.ಮಂಕಣಿ(23) ಹಾಗೂ ಯಲ್ಲನಗೌಡ.ಬಸವರಾಜ. ಮಂಕಣಿ(20) ಎಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ಪಿಎಸೈ ಚಂದ್ರಶೇಖರ ಹೆರಕಲ್, ಸಿಪಿಐ ಸೋಮಶೇಖರ ಜುಟ್ಟಲ್ ಹಾಗೂ ಡಿವೈಎಸ್ಪಿ ಅರುಣಕುಮಾರ ಕೋಳೂರ ಭೇಟಿ ನೀಡಿದ್ದಾರೆ. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.