News Kannada
Thursday, July 07 2022

ವಿಜಯಪುರ

ಪಠ್ಯಪುಸ್ತಕ ಕೇಸರೀಕರಣ ಪ್ರಶ್ನೇಯೆ ಇಲ್ಲ: ಸಚಿವ ಭೈರತಿ ಬಸವರಾಜ - 1 min read

Photo Credit :

ವಿಜಯಪುರ: ಪಠ್ಯಪುಸ್ತಕ ಕೇಸರೀಕರಣ ಪ್ರಶ್ನೇಯೆ ಇಲ್ಲ. ಸಮಾಜಕ್ಕೆ ಕೊಡುಗೆ ನೀಡಿದವರ ಪಠ್ಯ ಅಳವಡಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹೇಳಿದರು.

ನಗರದಲ್ಲಿ ಪಠ್ಯಪುಸ್ತಕ ಕೇಸರೀಕರಣ ಆರೋಪ ಕುರಿತು ಪ್ರತಿಕ್ರಿಯಿಸಿ, ಪಠ್ಯಪುಸ್ತಕ ವಿಷಯಕ್ಕೆ ಕೇಸರಿಕರಣ ಮತ್ತೊಂದು, ಮಗದೊಂದು ಮಾಡೋ ಪ್ರಸ್ತಾವಣೆ ನಮ್ಮ ಮುಂದಿಲ್ಲ. ಯಾವ ಪಠ್ಯ ಅಳವಡಿಕೆ ಮಾಡಬೇಕು ಅನ್ನೋದನ್ನ ತಜ್ಞರು ನಿರ್ಧರಿಸಿದ್ದಾರೆ. ತಜ್ಞರ ಅಭಿಪ್ರಾಯದಂತೆ ಮಾಡಲಾಗಿದೆ. ಇಂಥದ್ದೆ ಪಠ್ಯ ಕೈಬಿಟ್ಟಿದ್ದಾರೆ ಅನ್ನೋದಕ್ಕೆ ಪುರಾವೆ ಬೇಕಲ್ಲ. ಸುಮ್ಮನೆ ಮಾತನಾಡೋದು ಅಲ್ಲ ಎಂದರು.

ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಿರುವ ಕುರಿತು ಪ್ರತಿಕ್ರಿಯಿಸಿ, ಯಾರು ನಿರಾಶೆ ಆಗುವ ಅವಶ್ಯಕತೆ ಇಲ್ಲ. ವಿಜಯೇಂದ್ರಗೆ ಒಳ್ಳೆಯ ಸ್ಥಾನಮಾನ ಸಿಗುತ್ತದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಗೌರವವನ್ನು ಯಾರು ಕಡಿಮೆ ಮಾಡಲು ಆಗಲ್ಲ. ಯಡಿಯೂರಪ್ಪ ಶಕ್ತಿ ಕುಗ್ಗಿಸಲು ಯಾರಿಂದಲೂ ಆಗಲ್ಲ. ಅವರ ಸಾಮರ್ಥ್ಯ ರಾಜ್ಯಕ್ಕೆ ಗೊತ್ತಿದೆ. ಯಡಿಯೂರಪ್ಪ ತಂದೆಯ ಸಮಾನ ಆಗಿದ್ದಾರೆ ಎಂದರು.

See also  ಕರ್ನಾಟಕದಲ್ಲಿ ಉಪಚುನಾವಣೆ ಫಲಿತಾಂಶ, ಕರ್ನಾಟಕದಲ್ಲಿ ಬದಲಾವಣೆಯ ಸಂಕೇತ : ಐವನ್ ಡಿ ಸೋಜ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು