ವಿಜಯಪುರ: ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ಅನುಭವವಾಗಿದೆ. ಜಿಲ್ಲೆಯ ತಿಕೋಟಾ ತಾಲ್ಲೂಕಿನ ಸುತ್ತಮುತ್ತ ಕಂಪನದ ಅನುಭವವಾಗಿದೆ.
ಶುಕ್ರವಾರ ಮುಂಜಾನೆ ೩.೦೦ ರಿಂದ ೫.೦೦ ರವರೆಗೆ ಈ ಪ್ರದೇಶದಲ್ಲಿ ಕಂಪನದ ಅನುಭವವಾಗಿದೆ. ತಮ್ಮ ಮನೆಗಳಲ್ಲಿ ಮಲಗಿದ್ದ ಜನರು ಭಯದಿಂದ ಹೊರಗೆ ಓಡಿ ಬಂದಿದ್ದಾರೆ.
ಆದಾಗ್ಯೂ, ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಮಾಹಿತಿಯ ಆಧಾರದ ಮೇಲೆ. ಜಿಲ್ಲಾಡಳಿತ ವಿಜಯಪುರ ಜಿಲ್ಲೆಯಲ್ಲಿ ಯಾವುದೇ ಭೂಕಂಪ ಸಂಭವಿಸಿಲ್ಲ ಎಂದು ಈ ಘಟನೆಯನ್ನು ನಿರಾಕರಿಸಿದೆ.