ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಆಲೂರು ಗ್ರಾಮದ ಬಳಿ ಅನಿಲ ಸೋರಿಕೆಯಿಂದ ನಾಲ್ಕು ಗುಡಿಸಲುಗಳು ಭಸ್ಮವಾದ ಘಟನೆ ನಡೆದಿದೆ.
ನಾಗೇಶ್ ರೆಡ್ಡಿ ಅವರಿಗೆ ಸೇರಿದ ಗುಡಿಸಲು ಸೇರಿದಂತೆ ಮೂರು ಗುಡಿಸಲುಗಳು ಬೆಂಕಿಗೆ ಆಹುತಿಯಾಗಿವೆ. ಮನೆಯಲ್ಲಿರುವ 2 ಲಕ್ಷ ರೂ.ಗೂ ಹೆಚ್ಚು ವಸ್ತುಗಳು ಹಾನಿಗೀಡಾಗಿವೆ. ಘಟನೆಯ ಪರಿಣಾಮವಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.