ವಿಜಯಪುರ: ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಜಿಲ್ಲೆಯ ಉಕ್ಕಲಿ ಗ್ರಾಮದಲ್ಲಿ ನಡೆದಿದೆ.
ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ರೇಣುಕಾ ಅಮೀನಪ್ಪ ಕೋಣಿನ್ (26) ಹಾಗೂ ಯಲ್ಲವ್ವ (2) ಮತ್ತು ಅಮೃತಾ (1) ಮೃತ ದುರ್ದೈವಿಗಳು.
ರೇಣುಕಾ ಎರಡು ದಿನಗಳ ಹಿಂದೆ ತನ್ನ ಗಂಡನ ಮನೆಯಲ್ಲಿ ನಡೆದ ಜಗಳದ ನಂತರ ತನ್ನ ಇಬ್ಬರು ಮಕ್ಕಳೊಂದಿಗೆ ಮನೆಯನ್ನು ತೊರೆದಿದ್ದಳು. ಅಮೀನಪ್ಪ ಮತ್ತು ಅವನ ಕುಟುಂಬವು ರೇಣುಕಾ ಮತ್ತು ಮಕ್ಕಳನ್ನು ಹುಡುಕಿದರೂ ಅವರು ಸಿಗಲಿಲ್ಲ.