ವಿಜಯಪುರ: ಸೊಲ್ಲಾಪುರ್-ಹುಬ್ಬಳ್ಳಿ ರಾಜ್ಯ ಹೆದ್ದಾರಿ ಮಧ್ಯ ಇರುವ ಶಿರಾಡೋಣ ಚಡಚಣ ರಸ್ತೆ ಹದಿಗೆಟ್ಟಿದ್ದು ದುರಸ್ತಿ ಮಾಡುವಂತೆ ಆಗ್ರಹಿಸಿ ಶಿರಾಡೋಣ ಚಡಚಣ ಗ್ರಾಮಸ್ಥರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಧರಣಿ ಸತ್ಯಾಗ್ರಹ ಮಾಡಿದರು.
ಈ ವೇಳೆ ಪಿಡಬ್ಲ್ಯೂಡಿ ಹಾಗೂ ರಾಜ್ಯ ಹೆದ್ದಾರಿ ಇಲಾಖೆ ಅಧಿಕಾರಿಗೆ ಜೊತೆ ವಾಗ್ವಾದ ನಡೆಯಿತು. ಅಧಿಕಾರಿಗಳ ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂಪಡೆದರು. ಇದೇ ಸಂದರ್ಭದಲ್ಲಿ ರಸ್ತೆಯಲ್ಲಿ ಕುಳಿತು ಪ್ರತಿಭಟನಾಕಾರರು ಊಟ ಮಾಡಿದರು.
ಈ ಸಂದರ್ಭದಲ್ಲಿ ಮುದುಕಣ್ಣ ಹತ್ತರಕಿ, ಭೀಮಶಂಕರ ಪೂಜಾರಿ, ವಿಜಯಕುಮಾರ ಬಗಲಿ, ಸಿದ್ದರಾಮ ಹತ್ತರಕಿ, ರೇವಪ್ಪ ಹಬ್ಬಗೊಂಡೆ, ರಾಜಕುಮಾರ ಬಗಲಿ, ಬಸಂತರಾಯ ಪಾಟೀಲ, ಪಿಎಸ್ಐ ತಿಪ್ಪಾರೆಡ್ಡಿ, ತಶಿಲ್ದಾರ್ ಹನುಮಂತ ಶಿರಹಟ್ಟಿ, ಗ್ರಾಮದ ಹಿರಿಯರು ಗ್ರಾಮಸ್ಥರು ಶಾಲೆ ಮಕ್ಕಳು, ಮತ್ತು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.