ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಝಳಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆ ಇಲ್ಲದೆ 62.90 ಲಕ್ಷ ರೂ ಹಣವನ್ನು ಝಳಕಿ ಪೊಲೀಸ್ ಠಾಣೆ ಪೊಲೀಸರು ನಸುಕಿನ ವೇಳೆ ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನಿಂದ ಔರಂಗಾಬಾದ್ ಕಡೆ ಹೊರಟಿದ್ದ 2 ಲಾರಿಗಳಲ್ಲಿ ದಾಖಲೆ ಇಲ್ಲದೆ ಇದ್ದ ಕ್ರಮವಾಗಿ 46.75 ಲಕ್ಷ ರೂ ಹಾಗೂ 7.74 ಲಕ್ಷ ರೂ ಸೇರಿ 54.49 ಲಕ್ಷ ರೂ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ಮೂಲದ ಸೈಯದ್, ಜಮಿಲ್ ಹಾಗೂ ರಂಗಸ್ವಾಮಿ ಬಂದಿತರು. ಮೂವರಿಗೆ ನೋಟಿಸ್ ನೀಡಿ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ. ಮತ್ತೊಂದು ಪ್ರಕಣದಲ್ಲಿ ಸೊಲ್ಲಾಪುರದಿಂದ ವಿಜಯಪುರಕ್ಕೆ ಕಾರಿನಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ 8.50 ಲಕ್ಷ ರೂ ಹಣವನ್ನು ವಶಪಡಿಸಿಕೊಂಡಿದ್ದಾಗಿ ಪೋಲೀಸರು ತಿಳಿಸಿದ್ದಾರೆ ಈ ಕುರಿತು ಝಳಕಿ ಪೊಲೀಸ್ ಠಾಣೆ ದಾಖಲಾಗಿದೆ.