News Karnataka Kannada
Wednesday, April 24 2024
Cricket
ವಿಜಯಪುರ

ಅಧಿಕಾರದ ಅನುಭವವಿಲ್ಲ ಸಹಕರಿಸಿ ಉತ್ತಮ ಆಡಳಿತ ನೀಡುವೆ- ಶಾಸಕ ಅಶೋಕ ಮನಗೂಳಿ

I don't have experience of power, will cooperate and give good governance: MLA Ashok Managooli
Photo Credit : News Kannada

ಸಿಂದಗಿ: ತಾಂಬಾ ಗ್ರಾಮದಲ್ಲಿ ಹಲವು ದಿನಗಳಿಂದ ಹೋರಾಟ ನಡೆಯುತ್ತಿದೆ ಅವರ ಬೇಡಿಕೆ ಈಡೇರಿಸುವ ಕೆಲಸ ಪ್ರಮಾಣಿಕವಾಗಿ ಮಾಡುವೆ ಎಂದು ಸಿಂದಗಿ ಮತಕ್ಷೇತ್ರದ ನೂತನ ಶಾಸಕ ಅಶೋಕ ಮನಗೂಳಿ ಹೇಳಿದರು.

ಆನಂದ ಚಿತ್ರಮಂದಿರದ ಮುಂಬಾಗದಲ್ಲಿರುವ ಅವರ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ಕುರಿತು ಮಾತನಾಡಿದ ಅವರು ಸಿಂದಗಿ ಮತಕ್ಷೇತ್ರದ ಅವರ ಕರ್ತವ್ಯದ ಬಗ್ಗೆ ಮಾತನಾಡಿ ಸಿಂದಗಿ ನಗರಕ್ಕೆ 24×7 ಕುಡಿಯುವ ನೀರಿನ ಯೋಜನೆ, ಹಾಗೂ ಆಲಮೇಲ ಪಟ್ಟಣದ ಒಳಚರಂಡಿ ಯೋಜನೆ, ಸಿಂದಗಿ ಪುರಸಭೆ ನಗರಸಭೆಯನ್ನಾಗಿ ಮೇಲ್ದರ್ಜೆಗೆ ಮಾರ್ಪಾಡು ಮಾಡುವುದು, ನಗರಕ್ಕೆ ಅತಿ ಅವಶ್ಯಕ ವಿರುವ ಒಳಾಂಗಣ ಕ್ರಿಡಾಂಗಣ, ಹಾಗೂ ಹಲವು ದಿನಗಳಿಂದ ವಿವೇಕಾನಂದ ವೃತ್ತದ ಕಾಮಗಾರಿ ನೀಂತಿದ್ದು ಅದನ್ನು ಕೂಡಲೆ ಅನಾವರಣಿಸುವ ಕೆಲಸ ಮಾಡಲಾಗುವುದು ಎಂದರು.

ಆಲಮೇಲ ಪಟ್ಟಣಕ್ಕೆ ಪದವಿ ಪೂರ್ವ ಕಾಲೇಜಿನ ಬೇಡಿಕೆ ಇದೆ ಹಾಗೂ ಸಿಂದಗಿ ಮತಕ್ಷೇತ್ರಕ್ಕೆ ಮಾತ್ರವಲ್ಲದೆ ವಿವಿಧ ತಾಲೂಕುಗಳಿಗೆ ಅನೂಕುಲವಾಗುವಂತೆ ಆರ್.ಟಿ.ಓ ಕಛೇರಿಗೆ ಪ್ರಾಮುಖ್ಯತೆ ನೀಡಲಾಗುವುದು. ಗ್ರಾಮಿಣ ಮಟ್ಟದಲ್ಲಿ ಮಹಿಳೆಯರಿಗೆ ಶೌಚಾಲಯದ ಸಮಸ್ಯೆ ಹಾಗೂ ರಸ್ತೆ ಚರಂಡಿ ಬಗ್ಗೆ ಹೇಚ್ಚಿನ ಮಹತ್ವ ನೀಡಲಾಗುವುದು ಎಂದು ತಿಳಿಸಿದರು.

ನನ್ನಗೆ ಆಡಳಿತ ಅಧಿಕಾರದ ಅನುಭವ ಇಲ್ಲ ನಾನು ನೇರವಾಗಿ ಶಾಸಕನಾದವನ್ನು ನಾನು ಪ್ರಥಮಬಾರಿ ಉಪಚುನಾವಣೆಯಲ್ಲಿ ಸ್ಪರ್ಧಿಸಿದಾಗ ಸೋಲು ಕಂಡರು ಸಹಿತ ನಾನು ಹಿರಿಯರೊಂದಿಗೆ ಪಕ್ಷದ ಮುಖಂಡರೊಂದಿಗೆ, ಕಾರ್ಯಕರ್ತರೊಂದಿಗೆ ಕ್ಷೇತ್ರ ಸಂಚರಿಸಿ ಪಕ್ಷ ಗಟ್ಟಿಗೋಳಿಸಿದೆ. ನಮ್ಮ ತಂದೆಯವರಾದ ದಿ.ಎಂ.ಸಿ.ಮನಗೂಳಿ ಅವರ ಶಾಶ್ವತ ಯೋಜನೆಗಳು ಹಾಗೂ ಕಾಂಗ್ರೇಸ್ ಪಕ್ಷದ ಭರವಸೆಗಳಿಗೆ ಹಾಗೂ ಪಕ್ಷದ ಪ್ರಮುಖರ ಬೇವರಿನ ಹನಿಗೆ ಇಂದು ಗೆಲುವಾಗಿದೆ. ನನ್ನ ಗೇಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಕಾಂಗ್ರೇಸ್ ಮುಖಂಡರು, ಕಾರ್ಯಕರ್ತರು, ಅಭೀಮಾನಿಗಳು ಜನರ ಮನೆ-ಮನೆಗೆ ತೆರಳಿ ಅಶೊಕ ಮನಗೂಳಿ ಅವರಿಗೆ ಆಶೀರ್ವದಿಸಿ ಎಂದು ದುಡಿದ ಎಲ್ಲ ಕಾರ್ಯಕರ್ತರಿಗೆ ತುಂಬು ಹೃದಯದ ಧನ್ಯವಾದಗಳು. ನನ್ನಗೆ ಹರಸಿ ಆಶೀರ್ವದಿಸಿ ಚುನಾಯಿತ ಪ್ರತಿನಿಧಿಯಾಗಿ ಆಯ್ಕೆಮಾಡಿದ ಸಿಂದಗಿ ಮತಕ್ಷೇತ್ರದ ಮಹಾಜನತೆಗೆ ಅನಂತಕೋಟಿ ಧನ್ಯವಾದಗಳು ನನ್ನಗೆ ಸಹಕರಿಸಿ ಉತ್ತಮ ಾಡಳಿತ ನೀಡುವ ಪ್ರಯತ್ನ ಮಾಡುವೆ ಎಂದು ತಿಳಿಸಿದರು.

ಮಂಜುನಾಥ ಬಿಜಾಪುರ, ಎಸ್.ಎಸ್.ನೇಲ್ಲಗಿ, ವೈದ್ಯ ಶಿವಾನಂದ ಹೊಸಮನಿ, ವಾಯ್.ಸಿ.ಮಯೂರ, ಸುರೇಶ ಪೂಜಾರಿ, ಸುರೇಶ ಮಳಲಿ, ಮಹ್ಮದ ಪಟೇಲ ಬಿರಾದಾರ ಜೊತೆಗಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು