ಬೆಂಗಳೂರು(ನ.11) : ವಿದೇಶಗಳಲ್ಲಿ ರೂಪಾಂತರಿ ವೈರಸ್ ಉಲ್ಬಣವಾಗುತ್ತಿದೆ. ಹೀಗಾಗಿ ರೂಪಾಂತರಿ ವೈರಸ್ ಪತ್ತೆಗೆ ಬಿಬಿಎಂಪಿ ತೀವ್ರ ಶೋಧ ನಡೆಸುತ್ತಿದೆ. ಸೀವೇಜ್ ಮಾನಿಟರಿಂಗ್ಗೆ ಬಿಬಿಎಂಪಿ ಮುಂದಾಗಿದೆ. ಕೊಳಚೆ ನೀರಿನಲ್ಲಿರುವ ವೈರಸ್ಗಳನ್ನು ಗುರುತಿಸಬಹುದು.
ಎಲ್ಲಿ ಕೇಸ್ಗಳು ಹೆಚ್ಚಾಗಬಹುದು ಎಂಬ ಮಾಹಿತಿ ಸಿಗಲಿದೆ. ಆ ಪ್ರದೇಶದ ಜನರನ್ನ ಹೆಚ್ಚಾಗಿ ತಪಾಸಣೆಗೆ ಒಳಪಡಿಸಬಹುದು. ಹೀಗಾಗಿ ಸೀವೇಜ್ ಮಾನಿಟರಿಂಗ್ ಮೂಲಕ ಸೋಂಕು ನಿಯಂತ್ರಿಸಬಹುದಾಗಿದೆ ಎಂಬುದು ಬಿಬಿಎಂಪಿ ಪ್ಲಾನ್ ಆಗಿದೆ. ಇನ್ಸ್ಕಾಗ್ ಎಂಬ ರಾಷ್ಟ್ರಮಟ್ಟದ ಸಂಸ್ಥೆ ವೀವೇಜ್ ಮಾನಿಟರಿಂಗ್ ಮಾಡಲಿದೆ.