ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕ್ಯಾಸಿನೋಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಇಂದಿರಾನಗರ, ಸಂಪಿಗೆಹಳ್ಳಿ, ಹಲಸೂರಿನಲ್ಲಿರು ನಾಲ್ಕು ಕ್ಯಾಸಿನೋಗಳ ಮೇಲೆ ಸಿಸಿಬಿ ಪೊಲೀಸರು ರೇಡ್ ಮಾಡಿದ್ದಾರೆ.
ಸಿಸಿಬಿ ಡಿಸಿಪಿ ಬಸವರಾಜ್ ಅಂಗಡಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ದಾಳಿಯಲ್ಲಿ ಕಂತೆ ಕಂತೆ ಹಣ ಹಾಗೂ 104ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಬಾಣಸವಾಡಿಯ ಗೌರಿ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನಲ್, ಕೇಂಬ್ರಿಡ್ಜ್ ರಿಕ್ರಿಯೇಷನಲ್ ಕ್ಲಬ್, ಇಂದಿರಾನಗರದಲ್ಲಿರುವ ಕೇಂಬ್ರಿಡ್ಜ್ ರಿಕ್ರಿಯೇಷನಲ್ ಕ್ಲಬ್ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಕಿಂಗ್ಸ್ ವಿನ್ನರ್ ಕ್ಲಬ್, ಹಲಸೂರು ಠಾಣಾ ವ್ಯಾಪ್ತಿಯ ಸ್ಟಾರ್ ಲಯನ್ಸ್ ಕ್ಲಬ್, ಗೌರಿಸ್ಪೋರ್ಟ್ಸ್ ಮತ್ತು ರಿಕ್ರಿಯೇಷನಲ್ ಅಸೋಸಿಯೇಷನ್, ಕ್ಲಬ್ ಗಳ ಮೇಲೆ ಸಿಸಿಬಿ ದಾಳಿ ನಡೆಸಿದೆ. ಘಟನೆ ಸಂಬಂಧ 104 ಮಂದಿಯನ್ನು ಬಂಧಿಸಿ 4 ಲಕ್ಷ ಹಣ ಜಪ್ತಿ ಮಾಡಲಾಗಿದೆ.