News Kannada
Friday, December 02 2022

ಬೆಂಗಳೂರು

ಜೆಡಿಎಸ್‌ ನಾಯಕರ ವಿರುದ್ಧ ಗುಡುಗಿದ ಸುಮಲತಾ ಅಂಬರೀಷ್‌

Photo Credit :

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಮತ್ತು ಜೆಡಿಎಸ್ ನಾಯಕರ ನಡುವಿನ ಮಾತಿನ ಜಗಳ ಮತ್ತೆ ಮುಂದುವರಿದಿದೆ. ಮತ್ತೆ ಜೆಡಿಎಸ್ ನಾಯಕರ ವಿರುದ್ಧ ಸುಮಲತಾ ಗುಡುಗಿದ್ದಾರೆ.

‘ಜೆಡಿಎಸ್ ನಾಯಕರು ತಮ್ಮ ನಡವಳಿಕೆ, ಸಂಸ್ಕಾರರಹಿತ ಮಾತುಗಳಿಂದ ಜನರ ಮುಂದೆ ಸಣ್ಣವರಾಗುತ್ತಿದ್ದಾರೆ. ಅದು ಅವರ ನಿಜಸ್ವರೂಪ, ವ್ಯಕ್ತಿತ್ವ ಮಂಡ್ಯ ಜನತೆಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಅದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಎದುರಿಸಬೇಕಾಗುತ್ತದೆ’ ಎಂದು ಸುಮಲತಾ ಅಂಬರೀಷ್ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಂಬರೀಷ್ ಅವರ ಹೆಸರು ಹೇಳಲೂ ಇವರಿಗೆ ಯೋಗ್ಯತೆಯಿಲ್ಲ. ಅವರ ಹೆಸರನ್ನು ಪದೇ ಪದೇ ಪ್ರಸ್ತಾಪ ಮಾಡಿ ರಾಜಕಾರಣ ಮಾಡುತ್ತಿರುವವರು ಯಾರು, ನಾನು ಅಂಬರೀಷ್ ಅವರ ಹೆಸರಿನ ಮೇಲೆ, ಅನುಕಂಪದ ಆಧಾರದ ಮೇಲೆ ಮಂಡ್ಯದಲ್ಲಿ ಗೆದ್ದೆ ಅನ್ನುತ್ತಿದ್ದಾರೆ, ಜೆಡಿಎಸ್ ನಾಯಕರೇಕೆ ಅಂಬರೀಷ್ ಅವರ ಹೆಸರನ್ನು ಪ್ರಸ್ತಾಪಿಸಬೇಕು’ ಎಂದು ಪ್ರಶ್ನಿಸಿದರು.

ಅಂಬರೀಷ್ ಅವರು ಇದ್ದಾಗಲೇ ಕೆಆರ್‌ಎಸ್ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು ಎನ್ನುತ್ತಾರೆ, ಅದಕ್ಕೆ ಅವರ ಬಳಿ ಸಾಕ್ಷಿಗಳೇನಿದೆ, ಇದ್ದರೆ ತೋರಿಸಲಿ, ಅದಲ್ಲದೆ ಅವತ್ತು ಅಕ್ರಮ ಗಣಿಗಾರಿಕೆ ನಡೆದಿದ್ದರೆ ಅಂದು ಚಕಾರವೆತ್ತದವರು ಇಂದೇಕೆ ಅಂಬರೀಷ್ ಅವರು ಇಲ್ಲದಿರುವಾಗ ಹೇಳುತ್ತಿದ್ದಾರೆ ಎಂದು ಸುಮಲತಾ ಕೇಳಿದರು.

ಒತ್ತಾಯಿಸಿದ್ದೇ ನಾವು: ಅಂಬರೀಷ್ ಮೃತಪಟ್ಟಾಗ ಮೃತದೇಹವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ನನ್ನ ಮಗ ಅಭಿಷೇಕ್ ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಕೇಳಿಕೊಂಡನು, ಆಗ ಅವರು ಬಸ್ ವ್ಯವಸ್ಥೆ ಮಾಡುತ್ತೇನೆ, ಮಂಡ್ಯದಿಂದ ಜನರನ್ನು ಇಲ್ಲಿಗೆ ಕರೆಸಿ ಅಂದರು, ಅದಕ್ಕೆ ನಮ್ಮ ಕುಟುಂಬದವರು ಒಪ್ಪದ ಕಾರಣ ಕೊನೆಗೆ ಮಂಡ್ಯಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗಲು ಒಪ್ಪಿಗೆ ನೀಡಿದರು, ಇದಕ್ಕೆ ಮಾಧ್ಯಮಗಳ ವಿಡಿಯೊ-ಆಡಿಯೊ ಕ್ಲಿಪ್ಪಿಂಗ್ ಸಾಕ್ಷಿಯೇ ಇದೆ ಎಂದರು.

ಅಂಬಿ ಸ್ಮಾರಕ ನಿರ್ಮಾಣಕ್ಕೆ ಸಹಿ ಹಾಕಿದ್ದು ಹಾಲಿ ಮುಖ್ಯಮಂತ್ರಿ: ಅಂಬರೀಷ್ ಅವರ ಸ್ಮಾರಕ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿ ಸಹಿ ಹಾಕಿಸಿದ್ದು ಕುಮಾರಸ್ವಾಮಿಯವರು ಅಲ್ಲ, ಸ್ಮಾರಕ ನಿರ್ಮಾಣಕ್ಕೆ ಅವರು ಏನೂ ಅನುಕೂಲ ಮಾಡಿಕೊಟ್ಟಿರಲಿಲ್ಲ, ಸ್ಮಾರಕ ನಿರ್ಮಾಣ ಕುರಿತು ಹಿರಿಯ ನಟರಾದ ದೊಡ್ಡಣ್ಣ ಮತ್ತು ಶಿವರಾಮಣ್ಣನವರು ಮಾತನಾಡಲು ವಿಧಾನಸೌಧಕ್ಕೆ ಹೋಗಿದ್ದಾಗ ಅವರನ್ನು ಕಾಯಿಸಿ ಏಕವಚನದಲ್ಲಿ ಬೈದು ಮುಖಕ್ಕೆ ಪೇಪರ್ ಎಸೆದು ಇದೇ ಕುಮಾರಸ್ವಾಮಿಯವರು ಕಳುಹಿಸಿದ್ದರು ಎಂದು ಆರೋಪ ಮಾಡಿದ್ದಾರೆ.

See also  ಬೆಂಗಳೂರಿನಲ್ಲಿ ಅರ್ಚಕರ ಭವನ ನಿರ್ಮಾಣಕ್ಕೆ ಕ್ರಮ: ಸಚಿವೆ ಶಶಿಕಲಾ ಜೊಲ್ಲೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು