ಬೆಂಗಳೂರು: ನಗರದ ಕೆಆರ್ ಪುರಂನಲ್ಲಿ ಕಳ್ಳನೊಬ್ಬ ಬಂಧನದ ಭೀತಿಯಲ್ಲಿ ಸೈನೇಡ್ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಬಂಧಿತ ಸರಗಳ್ಳನನ್ನು ಆಂಧ್ರಪ್ರದೇಶದ ನಿವಾಸಿ ಸಿ.ಶಂಕರ್ ಎಂದು ಗುರುತಿಸಲಾಗಿದೆ. ಮೃತ ಶಂಕರ್ ಸುಮಾರು 7ಕ್ಕೂ ಅಧಿಕ ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ.
ಬುಧವಾರ ಪೊಲೀಸರು ಸುಲಿಬೆರೆ ಆಂಜನೇಯ ದೇವಸ್ಥಾನ ಬಳಿ ಶಂಕರ್ನನ್ನು ಬಂಧಿಸಿದ್ದರು. ಈ ವೇಳೆ ಶಂಕರ್ ಸೈನೇಡ್ ಸೇವಿಸಿರುವುದು ತಿಳಿದುಬಂದಿದ್ದು, ಕೂಡಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.
ಈ ಸಂಬಂಧ ಸುಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.