ಬೆಂಗಳೂರು: ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್‌ಗೆ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬುಲಾವ್ ನೋಟಿಸ್ ಬಂದಿರುವ ಹಿನ್ನೆಲೆ ಶಾಸಕ ಜಮೀರ್ ದೆಹಲಿಗೆ ತೆರಳಿದ್ದಾರೆ.
ಜಮೀರ್ ಅಹಮದ್ ಖಾನ್ ಗೆ ವಿಚಾರಣೆಗಾಗಿ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಬುಲಾವ್ ನೀಡಿರುವ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕೆಂಪೇಗೌಡ ಏರ್ ಪೋರ್ಟ್ ನಿಂದ ದೆಹಲಿಗೆ ತೆರಳಿದ್ದಾರೆ.
ಜಾರಿ ನಿರ್ದೇಶನಾಲಯ ಬುಲಾವ್ ನೀಡಿರುವ ವಿಚಾರವಾಗಿಯೇ ನಿನ್ನೆ ಡಿ ಕೆ ಶಿವಕುಮಾರ್ ಜೊತೆ ಶಾಸಕ ಜಮೀರ್ ಅಹಮದ್ ಚರ್ಚೆ ನಡೆಸಿದ್ದರು. ಶುಕ್ರವಾರ ತಡ ರಾತ್ರಿ ನಡೆದ ಭೇಟಿ ವೇಳೆ ಇ.ಡಿ. ವಿಚಾರಣೆ ಎದುರಿಸುವ ಬಗ್ಗೆ ಜಮೀರ್ ಅಹಮದ್ ಚರ್ಚೆ ನಡೆಸಿದ್ದರು ಎಂದು ತಿಳಿದುಬಂದಿದೆ.
ಇದೇ ತಿಂಗಳ 5ರಂದು ನಡೆದಿದ್ದ ಇ.ಡಿ ಅಧಿಕಾರಿಗಳು ಶಾಸಕ ಜಮೀರ್ಗೆ ಸೇರಿದ ಭವ್ಯ ಬಂಗಲೆ, ಮನೆಗಳು, ನ್ಯಾಷನಲ್ ಟ್ರಾವೆಲ್ಸ್ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಸತತ 24 ಗಂಟೆಗಳ ಕಾಲ ಇ.ಡಿ. ದಾಳಿ ನಡೆದಿತ್ತು.