ಬೆಂಗಳೂರು: ರಾಜ್ಯದ ಅಭಿವೃದ್ಧಿಗೆ ಬಹುವಾಗಿ ಶ್ರಮಿಸಿದ ಮಾಜಿ ಸಿಎಂಗಳ ಭಾವಚಿತ್ರಗಳನ್ನು ಬ್ಯಾಂಕ್ವೆಟ್ ಹಾಲ್‍ನಲ್ಲಿ ಹಾಕಿ ಅವರಿಗೆ ಗೌರವ ಸಲ್ಲಿಸುವ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿಗಳ ಜನ್ಮ ದಿನ ಹಾಗೂ ನಿಧನರಾದ ದಿನಗಳಲ್ಲಿ ಅವರ ಪ್ರತಿಮೆಗಳು ಇಲ್ಲದ ಕಾರಣ, ಯಾವುದೇ ರೀತಿಯ ಗೌರವ ಸಲ್ಲಿಸುವಂತಹ ವ್ಯವಸ್ಥೆಗಳಿರುವುದಿಲ್ಲ. ಹೀಗಾಗಿ, ಕಡಿದಾಳ ಮಂಜಪ್ಪ,ಎಸ್.ಆರ್.ಕಂಠಿ, ಬಿ.ಡಿ.ಜತ್ತಿ, ಆರ್. ಗುಂಡೂರಾವ್, ವೀರೇಂದ್ರ ಪಾಟೀಲ, ಎಸ್. ಬಂಗಾರಪ್ಪ, ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲ ಅವರಿಗೆ ಇಂತಹ ಗೌರವಗಳು ಸಿಗುತ್ತಿಲ್ಲ ಎಂದು ಸಿಎಂಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ದಿವಂಗತರಾಗಿರುವ ಎಲ್ಲ ಮಾಜಿ ಮುಖ್ಯಮಂತ್ರಿಗಳಿಗೂ ಸಮಾನ ಗೌರವ ನೀಡುವ ಉದ್ದೇಶದಿಂದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಅವರೆಲ್ಲರ ಪೂರ್ಣ ಪ್ರಮಾಣದ ಭಾವ ಚಿತ್ರಗಳನ್ನು ಅವರ ಅಧಿಕಾರದ ಅವಧಿ ನಮೂದಿಸಿ, ಗೌರವ ಸಲ್ಲಿಸುವ ಕೆಲಸ ಮಾಡಬೇಕು. ಇದೇ 29ರಂದು ರಾಮಕೃಷ್ಣ ಹೆಗಡೆಯವರ ಹುಟ್ಟುಹಬ್ಬದ ದಿನದಂದು ಈ ಯೋಜನೆಗೆ ನಾಂದಿ ಹಾಡಲಿ ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.