ಬೆಂಗಳೂರು : ಅತ್ಯಾಚಾರದಂತಹ ಸೂಕ್ಷ್ಮ ವಿಷಯದಲ್ಲಿ ಎಚ್ಚರಿಕೆಯಿಂದ ಮಾತನಾಡಿ ಎಂದು ಸಂಪುಟ ಸಚಿವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಕಿವಿಮಾತು ಹೇಳಿದ್ದಾರೆ.
ನಿಮ್ಮ ಇಲಾಖೆಯ ಅಧಿಕಾರಿಗಳ ಜೊತೆಯಲ್ಲಿದ್ದು, ಪ್ರಕರಣದ ವಿವರ ಪಡೆಯಿರಿ. ಅನಾವಶ್ಯಕವಾಗಿ ಮಾತಾಡಿ ಗೊಂದಲಕ್ಕೀಡಾಗಬೇಡಿ. ಈಗಾಗಲೇ ಗೃಹ ಸಚಿವರು ಸ್ಥಳಕ್ಕೆ ಹೋಗಿದ್ದಾರೆ. ನೀವು ಕೂಡ ಹೋಗಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ಗೆ ಸಿಎಂ ಸೂಚನೆ ನೀಡಿದರು. ಸಿಎಂ ಸೂಚನೆ ಹಿನ್ನೆಲೆ ಇದೀಗ ಹಾಲಪ್ಪ ಆಚಾರ್ ಮೈಸೂರಿಗೆ ತೆರಳಿದರು.