ಬೆಂಗಳೂರು: ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಎಮ್ಮೆಗಳು ಮೃತಪಟ್ಟಿರುವ ಅಮಾನವೀಯ ಘಟನೆಯೊಂದು ನಗರದ ಕುಂಬೇನ ಅಗ್ರಹಾರ ಬಳಿ ನಡೆದಿದೆ.
ಎಂದಿನಂತೆ ಯುವಕ ತನ್ನ ಎಮ್ಮೆಗಳನ್ನು ಕರೆದುಕೊಂಡು ಕುಂಬೇನ ಅಗ್ರಹಾರ ಬಳಿ ತೆರಳಿದ್ದನು. ಈ ವೇಳೆ ಯುವಕ ಅಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದನ್ನು ಗಮನಿಸದೆ ಎಮ್ಮೆಗಳನ್ನು ಮೇಯಲು ಬಿಟ್ಟಿದ್ದಾನೆ. ಪರಿಣಾಮ ವಿದ್ಯುತ್ ತಂತಿ ಸ್ಪರ್ಶಿಸಿ ನಾಲ್ಕು ಎಮ್ಮೆಗಳು ಮೃತಪಟ್ಟಿವೆ.
ಅದೃಷ್ಟವಶಾತ್ ಎಮ್ಮೆಗಳನ್ನು ಮೇಯಿಸಲು ಹೋಗಿದ್ದ ಯುವಕ ತಂತಿ ಗಮನಿಸಿ ಹಿಂದೆ ಸರಿದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕುಂಬೇನ ಅಗ್ರಹಾರ ಬಳಿ 12ಕೆವಿ ವಿದ್ಯುತ್ ವಯರ್ ಮುರಿದು ಬಿದ್ದಿತ್ತು. ವಿದ್ಯುತ್ ತಂತಿ ದುರಸ್ತಿಗೆ ಬೆಸ್ಕಾಂ ಸಿಬ್ಬಂದಿ ಉದಾಸೀನ ತೋರಿದ್ದೆ ಈ ಅವಘಡಕ್ಕೆ ಕಾರಣವಾಗಿದೆ.