News Kannada
Friday, March 24 2023

ಬೆಂಗಳೂರು

ಅತ್ಯಾಚಾರ ಆರೋಪಿಗಳ ಬಂಧನ: ಜಗ್ಗೇಶ್‌ರಿಂದ ₹1 ಲಕ್ಷ ಬಹುಮಾನ

Photo Credit :

ಬೆಂಗಳೂರು: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ತಕ್ಷಣದಲ್ಲೇ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ, ನಟ ಜಗ್ಗೇಶ್‌ ₹1 ಲಕ್ಷ ಬಹುಮಾನ ಘೋಷಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಜಗ್ಗೇಶ್‌, ‘ಅತ್ಯಾಚಾರ ಮಾಡಿದ ಕಾಮಪಿಪಾಸುಗಳನ್ನು ಬಂಧಿಸಿದ ನನ್ನ ಕರುನಾಡಿನ ಹೆಮ್ಮೆಯ ಆರಕ್ಷಕರಿಗೆ ನನ್ನ ವೈಯಕ್ತಿಕ ಅಭಿನಂದನೆಗಳು. ರಾಜ್ಯದ ಪೊಲೀಸರ ಬಗ್ಗೆ ನನಗೆ ಹೆಮ್ಮೆ ಇದೆ. ಪ್ರಕರಣದ ಆರೋಪಗಳನ್ನು ಪತ್ತೆ ಹಚ್ಚಿದ ನನ್ನ ನಲ್ಮೆಯ ಪೊಲೀಸರಿಗೆ 1 ಲಕ್ಷ ಬಹುಮಾನ. ನಿಮ್ಮ ಸಾರ್ಥಕ ಸೇವೆ ಹೀಗೆ ಮುಂದುವರಿಯಲಿ. ರಾಷ್ಟ್ರಕ್ಕೆ ಮಾದರಿ ನಮ್ಮ ಪೊಲೀಸ್’ ಎಂದಿದ್ದಾರೆ.

ಅತ್ಯಾಚಾರ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದ ಜಗ್ಗೇಶ್‌, ‘ಎಂಥ ಕ್ರೂರಿಗಳು…ತಾಯಿ ಹೆಣ್ಣಲ್ಲವೆ? ಅಕ್ಕ–ತಂಗಿ ಹೆಣ್ಣಲ್ಲವೆ? ಮಡದಿ ಹೆಣ್ಣಲ್ಲವೆ? ಹೆಣ್ಣು ಗೌರವಿಸದವರು ರಕ್ಕಸರು! ಈ ಕೃತ್ಯ ಎಸಗಿದ ಕ್ರೂರಿಗಳು ಗಲ್ಲು ಶಿಕ್ಷೆಗೆ ಅರ್ಹರು. ಈ ಕ್ರೂರ ಕೃತ್ಯಕ್ಕೆ ಖಂಡನೆ..’ ಎಂದು ಆ.26ರಂದು ಟ್ವೀಟ್‌ ಮಾಡಿದ್ದರು.

See also  ಕಾಂಗ್ರೆಸ್ ಶಾಸಕ ಜಮೀರ್‌ ಖಾನ್‌ಗೆ ಇಡಿ ನೋಟಿಸ್‌: ದೆಹಲಿಗೆ ದೌಡು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

149

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು