ಬೆಂಗಳೂರು: ಭಾನುವಾರ ಚಾಲನೆ ನೀಡಿದ ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಮಾರ್ಗ, ಪೂರ್ಣಗೊಳಿಸಲು ಕಾರಣದಾದ ಗುತ್ತಿಗೆದಾರರು ಮತ್ತು ಇತರ ಸಹಾಯಕ ಸಿಬ್ಬಂದಿ ನಿರ್ವಹಿಸಿದ ಅದ್ಭುತ ಕೆಲಸಕ್ಕೆ ನಮ್ಮ ಮೆಟ್ರೋ ಒಂದು ಸೆಲ್ಯೂಟ್ ಸಲ್ಲಿಸಿದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್(ಬಿಎಂಆರ್‌ಸಿಎಲ್) ಉದ್ಘಾಟನಾ ದಿನದಂದು ಮಾರ್ಗ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ 88 ವ್ಯಕ್ತಿಗಳನ್ನು, ಹೆಚ್ಚಿನವರು ಗುತ್ತಿಗೆ ಕೆಲಸಗಾರರಾಗಿದ್ದು, ಅವರಿಗೆ ನಾಯಂಡಹಳ್ಳಿಯಲ್ಲಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರು ಫ್ಲ್ಯಾಗ್ ಮಾಡಿದ ಮೊದಲ ರೈಲಿನಲ್ಲಿ ಪ್ರಯಾಣಿಸಲು ಅನುಮತಿ ನೀಡುವ ಮೂಲಕ ಗೌರವಿಸಲಾಯಿತು.
ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರು ಮೆಟ್ರೋ ರೈಲಿಗೆ ಚಾಲನೆ ನೀಡಿದ ಬಳಿಕ ಭಾಷಣ ಮಾಡಿ, ನಾಯಂಡಹಳ್ಳಿಯಿಂದ ಹೊರಟ ಎರಡನೇ ರೈಲಿನಲ್ಲಿ ತೆರಳಿದರು.
ಮಹಿಳಾ ರೈಲು ನಿರ್ವಾಹಕರಾದ ಬಿ ಗೌತಮಿ ಮತ್ತು ಸ್ಮಿತಾ ಎಂ ರೇವಣಕರ್ ನೇತೃತ್ವದಲ್ಲಿ ಉದ್ಘಾಟನಾ ರೈಲು 10.30 ಕ್ಕೆ ಹೊರಟುಹೋಯಿತು. ಈ ರೈಲಿನಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 88 ಸಿಬ್ಬಂದಿಗಳಿಗೆ ಪ್ರಯಾಣಿಸಲು ಅವಕಾಶ ನೀಡುವ ಮೂಲಕ ಗೌರವಿಸಲಾಯಿತು. ಅವರೊಂದಿಗೆ ಕೆಲವು ಭದ್ರತಾ ಸಿಬ್ಬಂದಿ ಸಹ ಸೇರಿಕೊಂಡರು.
‘ಇದು ನಮಗೆಲ್ಲರಿಗೂ ಒಂದು ದೊಡ್ಡ ದಿನವಾಗಿತ್ತು. ವೈಯಕ್ತಿಕವಾಗಿ, ನಾನು ಕಳೆದ ಐದು ವರ್ಷಗಳಿಂದ ಈ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೆ. ಮೊದಲ ರೈಲಿನಲ್ಲಿ ಪ್ರಯಾಣಿಸುವುದು ನನಗೆ ಮತ್ತು ನನ್ನ ತಂಡಕ್ಕೆ ಬಹಳ ರೋಮಾಂಚಕಾರಿ ಮತ್ತು ಅವಿಸ್ಮರಣೀಯವಾಗಿತ್ತು’ ಎಂದು ಬಿಎಂಆರ್‌ಸಿಎಲ್‌ಗಾಗಿ ಸಿವಿಲ್ ಕೆಲಸಗಳನ್ನು ನಿರ್ವಹಿಸಿದ ಸೋಮ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ಸುರಕ್ಷಾ ವ್ಯವಸ್ಥಾಪಕ ಎ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.