ಬೆಂಗಳೂರು: ಇಷ್ಟುದಿನಗಳ ಕಾಲ ಮೈಸೂರು ಅರಮನೆ ಒಳಾಂಗಣದಲ್ಲಿ ಚಿತ್ರೀಕರಣಕ್ಕಿದ್ದ ನಿರ್ಬಂಧವನ್ನು ರಾಜ್ಯ ಸರ್ಕಾರ ತೆರವುಗೊಳಿಸಿದೆ.
ಫ್ಲ್ಯಾಷ್ ರಹಿತ ಛಾಯಾಚಿತ್ರ ಕ್ಲಿಕ್ಕಿಸಲು ವಿಡಿಯೋ ಚಿತ್ರೀಕರಣ ಸೇರಿದಂತೆ ಎಲ್ಲಾ ರೀತಿಯ ಚಿತ್ರೀಕರಣಕ್ಕೆ ಸಚಿವ ಸಂಪುಟ ಅಸ್ತು ಎಂದಿದೆ. ಮೈಸೂರು ಅರಮನೆ ಚಿತ್ರೀಕರಣ ಪ್ರಕರಣದ ಬಗ್ಗೆ ಲೋಕಾಯುಕ್ತ ತನಿಖೆ ನಡೆದಿತ್ತು. ಅದರಲ್ಲಿ ಅಷ್ಟೊಂದು ಗಂಭೀರತೆ ಇಲ್ಲ ಎಂದು ಪ್ರಕರಣ ಕೈ ಬಿಡಲಾಗಿದೆ.