News Kannada
Wednesday, September 28 2022

ಬೆಂಗಳೂರು

ಎಲೆಕ್ಟ್ರಿಕ್ ಸೂಪರ್ ಬೈಕ್ ಉತ್ಪಾದನೆಯೂ ಕರ್ನಾಟಕದಲ್ಲೇ - 1 min read

Photo Credit :

ಬೆಂಗಳೂರು : ಬೆಂಗಳೂರಿಗೆ ಸನಿಹದಲ್ಲೇ ಓಲಾ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಬೃಹತ್ ಕಾರ್ಖಾನೆ ತೆಗೆದಿರುವುದರಿಂದ ಕರ್ನಾಟಕ ಅಷ್ಟರಮಟ್ಟಿಗೆ ವಿದ್ಯುತ್ ಚಾಲಿತ ವಾಹನ ತಯಾರಿಕೆಯಲ್ಲಿ ಗುರುತಿಸಿಕೊಂಡಿದೆ. ಇನ್ನೂ ಹಲವು ವಿದ್ಯುತ್ ಸಾರಿಗೆ ಸಂಬಂಧದ ಕಾರ್ಖಾನೆಗಳು ಅದಾಗಲೇ ಕರ್ನಾಟಕದಲ್ಲಿ ತಮ್ಮ ಯೋಜನೆ ಹಾಕಿಕೊಂಡಿವೆ.

ಈ ನಿಟ್ಟಿನಲ್ಲಿ ಒಂದು ಪ್ರಮುಖ ಸೇರ್ಪಡೆ ಅಲ್ಟ್ರಾವೈಯಲೆಟ್ ಅಟೊಮೆಟಿವ್ ಪ್ರೈವೇಟ್ ಲಿಮಿಟೆಡ್. ಬೆಂಗಳೂರಿನಲ್ಲಿ ತನ್ನ ಉತ್ಪಾದನಾ ಘಟಕ ಆರಂಭಿಸುವುದಾಗಿ ಈ ನವೋದ್ದಿಮೆ ಬುಧವಾರ ಪ್ರಕಟಿಸಿದೆ. ವಿದ್ಯುತ್ ಚಾಲಿತ ವಾಹನ ಯುಗದ ಟ್ರೆಂಡ್ ರೂಪಿಸುವಲ್ಲಿ ಇದು ಕರ್ನಾಟಕದ ಪಾತ್ರವನ್ನು ಮತ್ತಷ್ಟು ಬಲಗೊಳಿಸಿದೆಯಲ್ಲದೇ ಸ್ಥಳೀಯರಿಗೆ ಉದ್ಯೋಗಾವಕಾಶದ ಬಾಗಿಲನ್ನೂ ತೆರೆಯಲಿದೆ.

ಓಲಾ ಸೇರಿದಂತೆ ಈಗ ಸದ್ದು ಮಾಡುತ್ತಿರುವ ಹೆಚ್ಚಿನ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹೊರತರುತ್ತಿವೆ. ಅಲ್ಟ್ರಾವೈಯಲೆಟ್ ಅಟೊಮೆಟಿವ್ ತೊಡಗಿಸಿಕೊಂಡಿರುವುದು ಎಲೆಕ್ಟ್ರಿಕ್ ಬೈಕ್ ತಯಾರಿಕೆಯಲ್ಲಿ. ಎಫ್ 77 ಎಂಬ ಉನ್ನತ ಸಾಮರ್ಥ್ಯದ ಬೈಕ್ ತಯಾರಿಕೆ ಕೆಲ ತಿಂಗಳಲ್ಲಿ ಶುರುವಾಗಲಿದ್ದು, ಮಾರ್ಚ್ 2022ರ ವೇಳೆಗೆ ಈ ಬೈಕ್ ಲಭ್ಯವಾಗುವ ನಿರೀಕ್ಷೆ ಇದೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ 70,000 ಚದರ ಅಡಿಗಳಲ್ಲಿ ₹ 500 ಕೋಟಿ ಹೂಡಿಕೆಯಲ್ಲಿ ತಲೆಎತ್ತುತ್ತಿರುವ ಘಟಕವು ಮೊದಲ ವರ್ಷದಲ್ಲಿ 15,000 ಬೈಕುಗಳನ್ನು ಉತ್ಪಾದಿಸುವ ಗುರಿ ಹೊಂದಿದ್ದು ನಂತರ 1,20,000ಕ್ಕೆ ಸಾಮರ್ಥ್ಯ ಹೆಚ್ಚಿಸಿಕೊಳ್ಳಲಿದೆ.

ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಸೂಪರ್ ಬೈಕ್ ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ನಾರಾಯಣ ಸುಬ್ರಮಣ್ಯಂ ಮತ್ತು ನೀರಜ್ ರಾಜಮೋಹನ್ ಹುಟ್ಟುಹಾಕಿದ ನವೋದ್ದಿಮೆ ಅಲ್ಟ್ರಾವೈಲೆಟ್ ಅಟೊಮೆಟಿವ್ ಪ್ರೈವೇಟ್ ಲಿಮಿಟೆಡ್.

See also  ಕರ್ನಾಟಕ ಸಹಿತ ಆರು ರಾಜ್ಯಗಳಿಗೆ ಕೇಂದ್ರದಿಂದ ಹೆಚ್ಚುವರಿ ಅನುದಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು