News Kannada
Tuesday, December 06 2022

ಬೆಂಗಳೂರು

ಅರಣ್ಯ ನಿವಾಸಿಗಳಿಗೂ ಸೀಮೆ ಎಣ್ಣೆ ಪೂರೈಕೆ ಏಜೆನ್ಸಿ

Photo Credit :

ಬೆಂಗಳೂರು : ಸೀಮೆ ಎಣ್ಣೆ ಪೂರೈಕೆಗೆ ಖಾಸಗಿ ಏಜೆನ್ಸಿಗಳಿಗೆ ಪರವಾನಿಗೆಯನ್ನು ಇನ್ನು ಮುಂದೆ ಅರಣ್ಯ ನಿವಾಸಿಗಳಿಗೂ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ್‌ ಕತ್ತಿ ತಿಳಿಸಿದ್ದಾರೆ.

ಬಿಜೆಪಿ ಸದಸ್ಯ ಶಾಂತಾರಾಮ ಸಿದ್ದಿ ಅವರು ನಿಯಮ 72ರ ಅಡಿಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿ ಪ್ರತಿಕ್ರಿಯೆ ನೀಡಿದ ಅವರು, ಅರಣ್ಯ ವಾಸಿಗಳು ಮತ್ತು ಆದ್ಯತಾ ಪಡಿತರ ಚೀಟಿ ಹೊಂದಿರುವವರಿಗೆ ಅಡುಗೆ ಸಿದ್ಧಪಡಿಸಲು 2 ಲೀಟರ್‌ ಮತ್ತು ದೀಪಕ್ಕಾಗಿ 1 ಲೀಟರ್‌ ಸೀಮೆ ಎಣ್ಣೆ ನೀಡಲಾಗುತ್ತಿದೆ. ಆದರೆ, ಹೆಚ್ಚುವರಿ ಸೀಮೆಎಣ್ಣೆ ಅಗತ್ಯವಿದ್ದು, ಖಾಸಗಿ ಸಂಸ್ಥೆಗಳ ಪರವಾನಿಗೆ ನೀಡಲಾಗುವುದು. ಆ ಮೂಲಕ ಅರಣ್ಯವಾಸಿಗಳಿಗೆ ಅಗತ್ಯ ಪ್ರಮಾಣದ ಸೀಮೆ ಎಣ್ಣೆ ವಿತರಣೆ ಮಾಡಲಾಗುವುದು ಎಂದರು.

ಕೇಂದ್ರ ಸರ್ಕಾರದ ಉಜ್ವಲ ಮತ್ತು ರಾಜ್ಯ ಸರ್ಕಾರದಿಂದ ಅನಿಲ ಭಾಗ್ಯ ಯೋಜನೆಗಳ ಮೂಲಕ ಅರಣ್ಯ ವಾಸಿಗಳಿಗೆ ಎಲ್‌ಪಿಜಿ ಗ್ಯಾಸ್‌ ಸೌಲಭ್ಯ ಒದಗಿಸಲಾಗುತ್ತಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ 11,658 ಪಡಿತರ ಕುಟುಂಬಗಳಿದ್ದು, 34,974 ಲೀಟರ್‌ ಸೀಮೆಎಣ್ಣೆ ನೀಡಲಾಗುತ್ತಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಶಾಂತಾರಾಮ ಸಿದ್ದಿ, ಅರಣ್ಯ ವಾಸಿಗಳಲ್ಲಿ ವಿದ್ಯುತ್‌ ಸೌಲಭ್ಯ ಇಲ್ಲವಾಗಿದೆ. ಇದರಿಂದ ಸೀಮೆಎಣ್ಣೆ ದೀಪವನ್ನು ಅವಲಂಬಿಸಿದ್ದಾರೆ. ಆದರೆ, ಸರ್ಕಾರದಿಂದ ಪ್ರತಿ ತಿಂಗಳ 1 ಲೀಟರ್‌ ಮಾತ್ರ ಸೀಮೆಎಣ್ಣೆ ನೀಡಲಾಗುತ್ತಿದೆ. ಇದು ಸಾಕಾಗುತ್ತಿಲ್ಲ. ಹೀಗಾಗಿ ಈ ಭಾಗದ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುತ್ತಿದೆ. ಆದ್ದರಿಂದ ಅರಣ್ಯ ವಾಸಿಗಳ ಮಕ್ಕಳ ಹಿತ ದೃಷ್ಟಿಯಿಂದ ಹೆಚ್ಚುವರಿ ಸೀಮೆಎಣ್ಣೆ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

See also  ಮುಖ್ಯಮಂತ್ರಿ ಗೆ ಸರ್ಕಾರಿ ನಿವಾಸ ಹಂಚಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು