News Kannada
Sunday, September 25 2022

ಬೆಂಗಳೂರು

2022, ಜನವರಿ 26 ರಂದು ‘ಗ್ರಾಮ ಸೇವಾ ಯೋಜನೆ’ಗೆ ಚಾಲನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ - 1 min read

Photo Credit :

ಬೆಂಗಳೂರು:ಜನರ ಪಿಂಚಣಿ ಯೋಜನೆ, ಸೇವೆಗಳು, ರೇಷನ್, ಸಂಧ್ಯಾ ಸುರಕ್ಷ, ಅಂಗವಿಕಲರ ಮಾಸಾಶನ ಹೀಗೆ ಎಲ್ಲಾ ಯೋಜನೆಗಳು ಗ್ರಾಮಪಂಚಾಯತ್ ಮಟ್ಟದಲ್ಲಿ ಸಿಗಬೇಕು. ಅದು ಗ್ರಾಮಸೇವೆಯಾಗಿ ಬದಲಾಗಬೇಕು. ಗ್ರಾಮಸೇವಕರಿಗೆ ತರಬೇತಿಯನ್ನು ನೀಡಿ ಎಲ್ಲಾ ಸೇವೆಗಳು ಮನೆಮನೆಗೆ ತಲುಪುವ ಕೆಲಸ ಆಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ಅಮೃತ ಗ್ರಾಮ ಪಂಚಾಯಿತಿ ಯೋಜನೆ”ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಎಲ್ಲಾ ನಾಗರಿಕ ಸೇವೆಗಳು ಆನ್ ಲೈನ್ ಮೂಲಕ ಜನರಿಗೆ ಲಭ್ಯವಾಗಬೇಕು. ತಾಂತ್ರಿಕ ಮಟ್ಟದಲ್ಲಿ ಜನರಿಗೆ ಸೇವೆಗಳನ್ನು ನೀಡಲು ಕ್ರಮ ಕೈಗೊಳ್ಳುತ್ತೇವೆ. ಇದರಿಂದ ಗ್ರಾಮ ಪಂಚಾಯತ್, ತಹಶಿಲ್ದಾರ್ ಕಚೇರಿಗಳಿಗೆ ಜನರು ಹೋಗಿ ಸರದಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ಪ್ರಯಾಸಪಡುವುದು ತಪ್ಪುತ್ತದೆ ಎಂದರು.

ಅಮೃತ ಗ್ರಾಮ ಪಂಚಾಯಿತಿ ಯೋಜನೆ”ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜನರ ಪಿಂಚಣಿ ಯೋಜನೆ, ಸೇವೆಗಳು, ರೇಷನ್, ಸಂಧ್ಯಾ ಸುರಕ್ಷ, ಅಂಗವಿಕಲರ ಮಾಸಾಶನ ಹೀಗೆ ಎಲ್ಲಾ ಯೋಜನೆಗಳು ಗ್ರಾಮಪಂಚಾಯತ್ ಮಟ್ಟದಲ್ಲಿ ಸಿಗಬೇಕು. ಅದು ಗ್ರಾಮಸೇವೆಯಾಗಿ ಬದಲಾಗಬೇಕು. ಗ್ರಾಮಸೇವಕರಿಗೆ ತರಬೇತಿಯನ್ನು ನೀಡಿ ಎಲ್ಲಾ ಸೇವೆಗಳು ಮನೆಮನೆಗೆ ತಲುಪುವ ಕೆಲಸ ಆಗಬೇಕು ಎಂದು ಹೇಳಿದರು.

ಗ್ರಾಮ ಪಂಚಾಯತಿ ಮುಖಾಂತರ ಸರ್ಕಾರದ ಸೇವೆಗಳು ಜನರ ಮನೆಬಾಗಿಲಿಗೆ ಸಿಗುವಂತೆ ಮಾಡುವ ‘ಗ್ರಾಮ ಸೇವಾ ಯೋಜನೆ’ಗೆ 2022ರ ಜನವರಿ 26 ರಂದು ಚಾಲನೆ ನೀಡಲಾಗುವುದು. ಆರಂಭದಲ್ಲಿ 5 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದ್ದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ವಿಸ್ತರಿಸಲಾಗುವುದು ಎಂದು ಸಿಎಂ ಪ್ರಕಟಿಸಿದರು.

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಅಮೃತ ಗ್ರಾಮ ಪಂಚಾಯತಿ ಯೋಜನೆಗೆ ಚಾಲನೆ ನೀಡಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ತೋಟಗಾರಿಕೆ ಮತ್ತು ಯೋಜನೆ ಮತ್ತು ಸಾಂಖ್ಯಿಕ ಸಚಿವ ಎನ್.ಮುನಿರತ್ನ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಾಸಕ ರಿಜ್ವಾನ್ ಅರ್ಷದ್, ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

See also  ಕರ್ನಾಟಕದಲ್ಲಿ ಬಲವಂತದ ಧಾರ್ಮಿಕ ಮತಾಂತರದ ವಿರುದ್ಧ ಹೊಸ ಕಾನೂನು ತರಲು ಯೋಜನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು