News Kannada
Tuesday, December 06 2022

ಬೆಂಗಳೂರು

ಬನ್ನೇರುಘಟ್ಟದಲ್ಲಿ ಇನ್ನೆರಡು ತಿಂಗಳಲ್ಲಿ ಚಿರತೆ ಸಫಾರಿ ಆರಂಭ

Photo Credit :

ಬನ್ನೇರುಘಟ್ಟ : ಬನ್ನೇರುಘಟ್ಟದಲ್ಲಿ ಇನ್ನೆರಡು ತಿಂಗಳಲ್ಲಿ ಚಿರತೆ ಸಫಾರಿ ಆರಂಭವಾಗುವ ನಿರೀಕ್ಷೆ ಇದೆ. ಉದ್ಯಾನವನದ ಸಫಾರಿ ವಿಭಾಗದಲ್ಲಿ ಸದ್ಯ ಹುಲಿ, ಸಿಂಹ, ಆನೆ, ಕರಡಿಗಳನ್ನು ಮಾತ್ರ ನೋಡಬಹುದಾಗಿದೆ. ಚಿರತೆ ಸಫಾರಿ ಹೊಸ ಆಕರ್ಷಣೆಯಾಗಿ ಸೇರ್ಪಡೆಯಾಗಲಿದೆ.

ಚಿರತೆ ಸಫಾರಿಗಾಗಿ ಮೂರು ವರ್ಷಗಳಿಂದ ಕೆಲಸ ನಡೆಯುತ್ತಿದ್ದು, ಶೇ.80ರಷ್ಟು ಕಾಮಗಾರಿ ಮುಗಿದಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಪ್ರಾಯೋಗಿಕವಾಗಿ ಒಂದಷ್ಟು ದಿನ ಸಫಾರಿಯಲ್ಲಿ ವಾಹನಗಳನ್ನು ಕಳುಹಿಸಿ ಪರಿಶೀಲನೆ ನಡೆಸಲಾಗುವುದು. ತೊಡಕುಗಳು ಕಂಡು ಬಂದಲ್ಲಿ ಸರಿಪಡಿಸಿ ಬಳಿಕ ಪ್ರವಾಸಿಗರಿಗೆ ವೀಕ್ಷಣೆಗೆ ಅನುವು ಮಾಡಿಕೊಡಲು ಉದ್ದೇಶಿಸಲಾಗಿದೆ’ಉದ್ಯಾನದ ಕರಡಿ ಸಫಾರಿ ಬಳಿ ಚಿರತೆ ಸಫಾರಿ ಸಿದ್ಧವಾಗುತ್ತಿದೆ. ಸುಮಾರು 50 ಎಕರೆ ಜಾಗದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಚಿರತೆ ಸಫಾರಿ ನಿರ್ಮಾಣ ಮಾಡಲಾಗುತ್ತಿದೆ. ಉದ್ಯಾನವನದಲ್ಲಿರುವ ಚಿರತೆಗಳನ್ನು ಹಾಗೂ ಇಲ್ಲೇ ಹುಟ್ಟಿರುವ ಮರಿಗಳನ್ನು ಸಫಾರಿಯಲ್ಲಿ ಬಿಡಲಾಗುವುದು,” ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯ ನಿರ್ವಾಹಕ ಅಧಿಕಾರಿ ವನಶ್ರೀ ವಿಪಿನ್‌ ಸಿಂಗ್‌ ತಿಳಿಸಿದರು.ಚಿರತೆ ಸಫಾರಿ ಕಾಮಗಾರಿ ನಡೆಯುತ್ತಿದೆ. ಚೈನ್‌ ಮೆಷ್‌ ಕೆಲಸ ಆಗಿದೆ. ರಸ್ತೆ ಕೆಲಸಗಳು ನಡೆಯುತ್ತಿವೆ. ಚಿರತೆ ಮರ ಏರಿ ಅಲ್ಲಿಂದ ಹೊರಗೆ ಜಿಗಿಯುವ ಸಾಧ್ಯತೆಯೂ ಇರುವುದರಿಂದ ಮೆಶ್‌ನ ಮೇಲ್ಬಾಗದಲ್ಲಿ ತಗಡಿನ ಶೀಟ್‌ ಅಳವಡಿಸಲಾಗಿದೆ. ಇದರಿಂದ ಚಿರತೆ ಹೊರಬರುವ ಸಾಧ್ಯತೆ ಇಲ್ಲ. ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ಕೊಡಲಾಗಿದೆ.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಚಿರತೆಗಳ ಸಫಾರಿ ಪ್ರಾರಂಭಿಸಲಾಗುತ್ತಿದೆ. ಸುಮಾರು 2 ಕೋಟಿ ವೆಚ್ಚದಲ್ಲಿ 20 ಎಕರೆ ಪ್ರದೇಶದಲ್ಲಿ ಸಫಾರಿ ಆರಂಭಿಸುವ ಕಾರ್ಯ ನಡೆದಿದೆ. ಆರಂಭದಲ್ಲಿ ಹಂತದಲ್ಲಿ 8 ಚಿರತೆಗಳನ್ನು ಪ್ರಾಯೋಗಿಕ ಸಫಾರಿಗೆ ಬಳಸಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಇವುಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುವುದು ಎಂದು ವಿಪಿನ್‌ ಸಿಂಗ್‌ ಹೇಳಿದರು.ಸಫಾರಿ ಪ್ರಾರಂಭದಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳು ಲಭ್ಯವಾಗಲಿವೆ. ಈ ನಿಟ್ಟಿನಲ್ಲಿ ಸಫಾರಿಗೆ ಬೇಕಾದ ಸೌಲಭ್ಯಗಳು ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ 80 ಲಕ್ಷ ಅನುದಾನ ನೀಡುವಂತೆ ಪ್ರವಾಸೋದ್ಯಮ ಇಲಾಖೆಯನ್ನು ಕೋರಲಾಗಿದೆ ಎಂದು ಅವರು ವಿವರಿಸಿದರು.

See also  ಕೊರೋನಾ ಮಹಾಮಾರಿಯಿಂದ ಮೃತಪಟ್ಟ ಕುಟುಂಬಗಳಿಗೆ ಒಂದ ಲಕ್ಷ ರೂ ಪರಿಹಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು