ಬೆಂಗಳೂರು: ಚಾಮರಾಜಪೇಟೆಯಲ್ಲಿ ನಡೆದ ವೃದ್ಧನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ. ಯಾವಾಗಲೂ ಮೃತ ಜುಗರಾಜ್ ಜೊತೆ ಇರುತ್ತಿದ್ದ ಆರೋಪಿ ಬಿಜುರಾಮ್ ಮೇ 24ರ ರಾತ್ರಿ 10.30ರ ಸುಮಾರಿಗೆ ಜುಗರಾಜ್ ಕೊಲೆ ಮಾಡಿದ್ದಾಗಿ ಸುಳಿವು ಸಿಕ್ಕಿದೆ.
ಎರಡನೇ ಮಗ ಆನಂದ್, ಆತನ ಸೊಸೆ ಮತ್ತು ಜುಗರಾಜ್ ಮೂರು ಜನ ಒಂದೇ ಅಪಾರ್ಟ್ಮೆಂಟ್ ನಲ್ಲಿ ವಾಸ ಮಾಡ್ತಿದ್ರು. ಬ್ಯುಸಿನೆಸ್ನ ಎಲ್ಲಾ ವ್ಯವಹಾರ ಮೃತ ಜುಗರಾಜ್ ನೋಡಿಕೊಳ್ತಿದ್ದ. ಆತನ ಬಳಿಯೇ ಲಾಕರ್ ಗಳಿರ್ತಿದ್ವು. ಆರೋಪಿ ಬಿಜರಾಮ್ ವೃದ್ದನನ್ನ ಪ್ರತಿ ದಿನ ಅಂಗಡಿಗೆ ಕರೆದುಕೊಂಡು ಹೋಗೋದು, ಬರೋದು ಮಾಡ್ತಿದ್ದ.
ಅದರಂತೆ ನಿನ್ನೆ ರಾತ್ರಿ 8.30ರ ಸುಮಾರಿಗೆ ಅಂಗಡಿಯಿಂದ ಅಪಾರ್ಟ್ಮೆಂಟ್ ಗೆ ಕರೆದುಕೊಂಡು ಬಂದಿದ್ದಾನೆ. ನಂತರ ಅಪಾರ್ಟ್ಮೆಂಟ್ ಗೆ ಬಿಡೋಕೆ ಹೋಗಿ ಕೃತ್ಯ ಎಸಗಿದ್ದಾನೆ. ವೃದ್ಧನ ಕೈ ಹಿಂದೆ ಕಟ್ಟಿ ಮುಖಕ್ಕೆ ಖಾರದ ಪುಡಿ ಹಾಕಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಮನೇಲಿರೋ ಚಿನ್ನಾಭರಣಗಳನ್ನ ಕದ್ದು ಎಸ್ಕೇಪ್ ಆಗಿದ್ದಾನೆ. ನಾಲ್ಕು ಬ್ಯಾಗ್ಗಳಲ್ಲಿ ಚಿನ್ನಾಭರಣಗಳನ್ನ ತುಂಬಿಕೊಂಡು ಆರೋಪಿ ಪರಾರಿಯಾಗಿದ್ದಾನೆ. ಚಿನ್ನಾಭರಣಗಳನ್ನ ತೆಗೆದುಕೊಂಡು ಹೋಗೋಕಾಗದೆ 25 ಕೆಜಿ ಬೆಳ್ಳಿ ಅಪಾರ್ಟ್ಮೆಂಟ್ ನಲ್ಲೇ ಬಿಟ್ಟೋಗಿದ್ದಾನೆ. ಸದ್ಯ ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ.