News Kannada
Wednesday, October 05 2022

ಬೆಂಗಳೂರು

ಹಣಕ್ಕಾಗಿ ಪೀಡಿಸುತಿದ್ದ ಮಗನನ್ನು ಹತ್ಯೆಗೈದ ತಂದೆ - 1 min read

8 sovereigns of gold jewellery stolen
Photo Credit :

ಬೆಂಗಳೂರು: ಪದೇ ಪದೇ ಹಣ ಕೊಡುವಂತೆ ಪೀಡಿಸುತ್ತಿದ್ದ ಮಗನಿಗೆ ಕಬ್ಬಿಣದ ರಾಡಿನಿಂದ ಹೊಡೆದು ತಂದೆಯೇ ಕೊಲೆ ಮಾಡಿರುವ ಘಟನೆ ಆರ್ಟಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ.

ಗ್ಯಾರೇಜ್ನಲ್ಲಿ ಮೆಕಾನಿಕ್ ಕೆಲಸ ಮಾಡುತ್ತಿದ್ದ ಮೊಹಮದ್ ಸುಲೇಮಾನ್(18) ಕೊಲೆಯಾದವನು.

ಚಾಮುಂಡಿನಗರದ ನಿವಾಸಿ ಮೊಹಮ್ಮದ್ ಸಂಶೀರ್(42) ಬಾರ್ ಬೆಂಡರ್ ವೃತ್ತಿ ಮಾಡುತ್ತಿದ್ದು, ಇವರ ಮಗ ಮೊಹಮ್ಮದ್ ಸುಲೇಮಾನ್ ಪದೇ ಪದೇ ಅವರ ಬಳಿ ಹಣ ಕೇಳುತ್ತಿದ್ದರಿಂದ ತಂದೆ-ಮಗನ ಮಧ್ಯೆ ನಿನ್ನೆ ಜಗಳವಾಗಿದೆ. ಇಂದು ಮುಂಜಾನೆ 5.30ರ ಸುಮಾರಿನಲ್ಲಿ ಮತ್ತೆ ತಂದೆ-ಮಗನ ನಡುವೆ ಹಣಕಾಸು ವಿಚಾರವಾಗಿ ಮಾತಿಗೆ ಮಾತು ಬೆಳೆದಿದೆ.

ಆ ಸಂದರ್ಭದಲ್ಲಿ ತಂದೆ ಕೈಗೆ ಸಿಕ್ಕಿದ ಕಬ್ಬಿಣದ ರಾಡಿನಿಂದ ಮಗನಿಗೆ ಹೊಡೆದಿದ್ದರಿಂದ ಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಾನೆ. ಘಟನೆ ನಡೆದ ಸಂದರ್ಭದಲ್ಲಿ ಮೊಹಮ್ಮದ್ ಸುಲೇಮಾನ್ ಅವರ ತಾಯಿ ಮನೆಯಲ್ಲಿರಿಲಿಲ್ಲ.

ಘಟನೆ ಸಂಬಂಧ ಮೊಹಮ್ಮದ್ ಸುಲೇಮಾನ್ ಅವರ ತಾತ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

See also  ರಾಜ್ಯದಲ್ಲಿ ಬೂಸ್ಟರ್ ಡೋಸ್ ಅವಶ್ಯಕತೆ ಇಲ್ಲ- ಐಸಿಎಂಆರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು