News Kannada
Wednesday, July 06 2022

ಬೆಂಗಳೂರು

ಬೆಂಗಳೂರು ‘ಜಾಗತಿಕ ಸ್ಮಾರ್ಟ್ ರಾಂಕಿಂಗ್’ನಲ್ಲಿ 22ನೇ ಸ್ಥಾನ: ಅಶ್ವತ್ಥನಾರಾಯಣ - 1 min read

Photo Credit :

ಬೆಂಗಳೂರು: ಜಿ.ಎಸ್.ಇ.ಆರ್. 2022 ಸಮೀಕ್ಷಾ ವರದಿ ಪ್ರಕಾರ ಬೆಂಗಳೂರು ಸ್ಟಾರ್ಟ್ ಅಪ್ ಕಾರ್ಯಪರಿಸರವು ಕಳೆದ ಸಾಲಿಗಿಂತ ಒಂದು ರಾಂಕ್(22ನೇ) ಮೇಲಕ್ಕೇರಿದೆ ಎಂದು ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಜೀನೋಮ್ ಸ್ಟಾರ್ಟ್ ಅಪ್ ಪ್ರಕಟಿಸಿರುವ ಈ ವರದಿಯಲ್ಲಿ ಬೆಂಗಳೂರು ನಗರವು ನಿಧಿ ಹೂಡಿಕೆ, ಸಂಪರ್ಕ,ತಲುಪುವಿಕೆ ಮಾರುಕಟ್ಟೆ , ಪ್ರತಿಭೆ, ಅನುಭವ ಹಾಗೂ ಜ್ಞಾನಾರ್ಜನೆ ವಿಭಾಗಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದೆ ಎಂದರು.

ಬೆಂಗಳೂರು ಸ್ಟಾರ್ಟ್ ಅಪ್ ಕಾರ್ಯಪರಿಸರವು ನಿಧಿ ಹೂಡಿಕೆಯಲ್ಲಿ ಜಾಗತಿಕವಾಗಿ 15ರೊಳಗಿನ ಸ್ಥಾನದಲ್ಲಿದ್ದರೆ, ಸಾಧನೆಯಲ್ಲಿ 25ರೊಳಗಿನ ಸ್ಥಾನದಲ್ಲಿದೆ. ನಾಲ್ಕು ವರ್ಷಗಳ ಅವಧಿಯಲ್ಲಿ (2017-2021) ಬೆಂಗಳೂರು ನಗರವು 21 ಶತಕೋಟಿ ಡಾಲರ್ ಶೋಧನಾ ಬಂಡವಾಳವನ್ನು ಆಕರ್ಷಿಸಿದ್ದು, ಇದು ಜಾಗತಿಕ ಸರಾಸರಿಯಾದ 4.5 ಶತಕೋಟಿ ಡಾಲರ್ ಗಳಿಗಿಂತ ತುಂಬಾ ಮುಂದಿದೆ.

ಬೆಂಗಳೂರು ನಗರವು ತಂತ್ರಜ್ಞಾನ ಸಂಬಂಧಿ ಶೋಧನಾ ಬಂಡವಾಳ ಹೂಡಿಕೆಯಲ್ಲಿ ಜಾಗತಿಕವಾಗಿ 5ನೇ ಸ್ಥಾನಕ್ಕೆ ಪಾತ್ರವಾಗಿದೆ. ಪ್ರಸಕ್ತ 2022ರ ಐದು ತಿಂಗಳುಗಳಲ್ಲಿ ನಗರದಲ್ಲಿ ಈ ವಲಯದಲ್ಲಿ 7.5 ಶತಕೋಟಿ ಡಾಲರ್ ಶೋಧನಾ ಬಂಡವಾಳ ಹೂಡಿಕೆಯಾಗಿದೆ. ಇದು ಹೋದ ವರ್ಷದ ಇದೇ ಅವಧಿಯಲ್ಲಿ ಹೂಡಿಕೆಯಾಗಿದ್ದ 5.2 ಶತಕೋಟಿ ಡಾಲರ್ ಗಳಿಗೆ ಹೋಲಿಸಿದರೆ ಗಣನೀಯ ಏರಿಕೆಯಾಗಿದೆ.

ಇದೇ ವೇಳೆ, ಫಿನ್ ಟೆಕ್ ಉಪವಲಯಕ್ಕೆ ಸಂಬಂಧಿಸಿದಂತೆ ಶೋಧನಾ ಬಂಡವಾಳ ಆಕರ್ಷಿಸುವಲ್ಲಿ ಬೆಂಗಳೂರು 8ನೇ ಸ್ಥಾನ ಪಡೆದಿರುವುದನ್ನು ಲಂಡನ್ & ಪಾರ್ಟ್ ನರ್ಸ್ ಹಾಗೂ ಡೀಲ್ ರೂಮ್ ನಡೆಸಿರುವ ವಿಶ್ಲೇಷಣೆಗಳು ದೃಢಪಡಿಸಿವೆ.

See also  ಶಾಸಕ ಜಮೀರ್, ರೋಷನ್ ಬೇಗ್‌ ಮನೆ ಮೇಲಿನ ಇಡಿ ಅಧಿಕಾರಿಗಳ ಶೋಧ ಮುಕ್ತಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು