News Kannada
Thursday, December 01 2022

ಬೆಂಗಳೂರು

ಬೆಂಗಳೂರು: ನವೆಂಬರ್‌ 19,20 ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಮಟ್ಟದ ದೇಶೀಯ ತಳಿಗಳ ಡಾಗ್‌ ಷೋ - 1 min read

Bengaluru: A national-level dog show of indigenous breeds will be held in Bengaluru on November 19 and 20.
Photo Credit : By Author

ಬೆಂಗಳೂರು: ಬೆಂಗಳೂರು ಕೆನಾಲ್ ಕ್ಲಬ್‌ನ 53 ಹಾಗೂ 54ನೇ ಚಾಂಪಿಯನ್‌ಶಿಪ್ ಡಾಗ್ ಶೋ ಹಾಗೂ ಸಿಲಿಕಾನ್‌ಸಿಟಿ ಕೆನಾಲ್ ಕ್ಲಬ್‌ನ 125 ಹಾಗೂ 126ನೇ ಚಾಂಪಿಯನ್‌ಶಿಪ್ ಡಾಗ್ ಶೋ ಜಂಟಿಯಾಗಿ ನವೆಂಬರ್ 19 ಹಾಗೂ 20ರಂದು ದೇವನಹಳ್ಳಿ ಬಳಿ ಇರುವ ಹೀರಾ ಫಾರ್ಮ್ಸ್ನಲ್ಲಿ ನಡೆಯಲಿದೆ ಎಂದು ಬೆಂಗಳೂರು ಕೆನಾಲ್ ಕ್ಲಬ್ಬಿನ ಕಾರ್ಯದರ್ಶಿ ಸಂತೋಶ್ ತಿಳಿಸಿದರು.

ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ವಾನಗಳ ತಳಿಯ ಕುರಿತಾಗಿ ಸ್ಪರ್ಧೆ ನಡೆಯುತ್ತಿರುವುದು ಈ ಚಾಂಪಿಯನ್‌ಶಿಪ್‌ನ ವಿಶೇಷ. ಶ್ವಾನಗಳ ತಳಿ ಹಾಗೂ ಅದರ ಪರಿಶುದ್ಧತೆಯ ಆಧಾರದ ಮೇಲೆ ಜಪಾನ್, ನೆದರ್‌ಲ್ಯಾಂಡ್ಸ್ ಮುಂತಾದ ದೇಶಗಳಿಂದ ಬಂದ ತೀರ್ಪುಗಾರರು ವಿಜೇತ ಶ್ವಾನವನ್ನು ಆಯ್ಕೆಮಾಡಲಿದ್ದಾರೆ. ಭಾರತೀಯ ತಳಿಯ ಜನಪ್ರಿಯ ಶ್ವಾನ ಮುಧೋಳ ಈ ಚಾಂಪಿಯನ್‌ಶಿಪ್‌ನ ಮುಖ್ಯ ಆಕರ್ಷಣೆ ಆಗಿರಲಿದೆ. ಭಾರತೀಯ ಸೇನೆ ಹಾಗೂ ಪ್ರಧಾನ ಮಂತ್ರಿಯವರ ರಕ್ಷಣಾ ತಂಡದಲ್ಲಿ ಮುಧೋಳ ತಳಿಯ ಶ್ವಾನವನ್ನು ಹೆಚ್ಚು ಬಳಸಲಾಗುತ್ತದೆ. ಈ ತಳಿಯ ಮೂಲತಃ ಅಂದ ಚಂದ, ಮೈಕಟ್ಟು, ರೂಪ ಹೇಗಿರಬೇಕು? ಯಾವ ವಯಸ್ಸಿಗೆ ಅದರ ಬೆಳವಣಿಗೆ ಎಷ್ಟಿರಬೇಕು? ಎನ್ನುವ ಕುರಿತಾಗಿಯೂ ವಿಶ್ಲೇಷಿಸಲಾಗುವುದು. ಜೊತೆಗೆ ನಮ್ಮ ದೇಶದ ತಳಿಗಳನ್ನು ಗುರುತಿಸಿ, ಅವುಗಳನ್ನು ಸಾಕಾಣಿಕೆ ಮಾಡಲು ಪ್ರೇರೇಪಿಸುವುದೂ ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಬೆಂಗಳೂರು ಕೆನಾಲ್ ಕ್ಲಬ್‌ನ ಖಜಾಂಚಿ ಅಮೃತ್ ಹಿರಣ್ಯ ಮಾತನಾಡಿ, ಡಾಗ್ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿದ ಶ್ವಾನಗಳ ತಳಿ ಹಾಗೂ ಯಾವ ಶ್ವಾನ ತನ್ನ ಮೂಲ ತಳಿಯೊಂದಿಗೆ ಹೆಚ್ಚು ಹೊಂದುತ್ತದೊ ಅದಕ್ಕೆ ಬಹುಮಾನ ನೀಡಲಾಗುವುದು. ಇದರಿಂದ ನೈತಿಕ ಸಂತಾನೋತ್ಪತ್ತಿ ಹಾಗೂ ದೇಶೀಯ ತಳಿಗಳಾದ ಮುಧೋಳ್, ರಾಜಪಾಳ್ಯಂ, ಕಣ್ಣಿ, ಕೊಂಬಾಯ್ ಮುಂತಾದ ತಳಿಯ ಶ್ವಾನ ಸಾಕಾಣಿಕೆಯನ್ನು ಪ್ರೋತ್ಸಾಹಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಭಾನುವಾರ (ನವೆಂಬರ್ 20 ರಂದು) ಮಕ್ಕಳಿಗಾಗಿ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಜೊತೆಗೆ ಮಕ್ಕಳಲ್ಲಿ ಶ್ವಾನಗಳೆಡೆಗೆ ಪ್ರೀತಿ ಬೆಳೆಸುವ ದೃಷ್ಟಿಯಿಂದ ಅವುಗಳಿಗೆ ಬಾಚುವುದು, ಅವುಗಳ ಕಿವಿ-ಉಗುರಗಳನ್ನು ಶುದ್ಧಗೊಳಿಸುವುದು, ಅವುಗಳ ಬಗ್ಗೆ ಅರಿಯುವುದು ಮುಂತಾದ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ ಎಂದರು.

ವಿಶೇಷವಾದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಹಲವಾರು ತಳಿಯ ಶ್ವಾನಗಳ ಜೊತೆಗೆ ದೇಶೀಯ ತಳಿಯಾದ ಮುಧೋಳ ತಳಿಯ ಶ್ವಾನವನ್ನು ಕಂಡು ಸಂಭ್ರಮಿಸುವ ಅವಕಾಶ ಶ್ವಾನಪ್ರಿಯರಿಗೆ ದೊರಕಲಿದೆ. ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಧೋಳದಿಂದ ಆಗಮಿಸಿದ್ದ ಮುಧೋಳ ತಳಿಗಳ ಬ್ರೀಡರ್‌ಗಳು ತಾವು ಸಾಕಿರುವ ಶ್ವಾನಗಳ ಜೊತೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು.

ಸ್ಥಳ: ಹೀರಾ ಫಾರ್ಮ್ಸ್, ದೇವನಹಳ್ಳಿ ಸಮೀಪ ,ದಿನಾಂಕ: ನವೆಂಬರ್ 19 ಹಾಗೂ 20.

See also  ಬಂಟ್ವಾಳ: ಪಿಂಕ್ ಟ್ಲಾಯೆಟ್ ನಲ್ಲಿ ವಾಮಾಚಾರ ನಡೆದಿರುವ ಬಗ್ಗೆ ಅನುಮಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

11671
Media Release

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು