News Kannada
Monday, February 06 2023

ಬೆಂಗಳೂರು

ಬೆಂಗಳೂರು: ಬೆಂಗಳೂರು ವಿವಿ ಪ್ರವೇಶಾತಿಗೆ ಅರ್ಜಿ ಅವಧಿ ವಿಸ್ತರಣೆ

Application deadline for admission to Bangalore University extended
Photo Credit : By Author

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವು ಸ್ನಾತಕೋತ್ತರ ಪದವಿ ಪ್ರವೇಶಾತಿಯ ಅಧಿಸೂಚನೆಯನ್ನು ಮುಂದುವರೆಸಿ, ಖಾಲಿಯಿರುವ ಸ್ಥಾನಗಳನ್ನು ಭರ್ತಿ ಮಾಡಲು ಅರ್ಜಿಸಲ್ಲಿಸಲು ಅವಧಿ ವಿಸ್ತರಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿಸೆಂಬರ್ 14 ಕೊನೆಯ ದಿನಾಂಕವಾಗಿದೆ. ಡೌನ್‍ಲೋಡ್ ಮಾಡಿಕೊಂಡ ಅರ್ಜಿಗಳ ಜೊತೆಯಲ್ಲಿ ಸ್ವಯಂ ದೃಢೀಕರಿಸಿದ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನಾಂಕವಾಗಿದೆ.

ಕಲಾ ನಿಕಾಯದಲ್ಲಿ, ಎಂ.ಎ. – ಅರ್ಥಶಾಸ್ತ್ರ, ಆಂಗ್ಲ, ಹಿಂದಿ, ಇತಿಹಾಸ, ಪತ್ರಿಕೋದ್ಯಮ ಮತ್ತು ಸಂವಹನ, ಕನ್ನಡ, ತತ್ವಶಾಸ್ತ್ರ, ರಾಜ್ಯಶಾಸ್ತ್ರ, ಗ್ರಾಮೀಣಾಭಿವೃದ್ಧಿ ಅಧ್ಯಯನ, ಸಂಸ್ಕೃತ, ಸಮಾಜಶಾಸ್ತ್ರ, ತೆಲುಗು, ಉರ್ದು, ಮಹಿಳಾ ಅಧ್ಯಯನ, ಪ್ರದರ್ಶನ ಕಲೆ, ನೃತ್ಯ, ಭರತನಾಟ್ಯ, ನಾಟಕ, ಸಂಗೀತ ಕೋರ್ಸುಗಳು. ಸ್ವ ಹಣಕಾಸು ಕೋರ್ಸುಗಳು, ಎಂ.ಎ.- ಮಾಧ್ಯಮ ಅಧ್ಯಯನ ಮತ್ತು ಸಾರ್ವಜನಿಕ ಸಂಪರ್ಕ ಮತ್ತು ಜಾಹೀರಾತು.

ವಿಜ್ಞಾನ ನಿಕಾಯದಲ್ಲಿ ಎಂ.ಎಸ್ಸಿ ಅನ್ವಯಿಕ ತಳಿಶಾಸ್ತ್ರ, ಅನ್ವಯಿಕ ಭೂಗರ್ಭಶಾಸ್ತ್ರ, ಜೀವರಸಾಯನಶಾಸ್ತ್ರ, ಜೀವತಂತ್ರಜ್ಞಾನ, ರಸಾಯನಶಾಸ್ತ್ರ, ಗಣಕ ವಿಜ್ಞಾನ, ವಿದ್ಯುನ್ಮಾನ ಮಾಧ್ಯಮ, ವಿದ್ಯುನ್ಮಾನ ವಿಜ್ಞಾನ, ಪರಿಸರ ವಿಜ್ಞಾನ, ಪುಡ್ ಟೆಕ್ನಾಲಜಿ, ಫ್ಯಾಷನ್ ಅಂಡ್ ಅಪೆರಲ್ ಡಿಸೈನ್, ಭೂಗೋಳಶಾಸ್ತ್ರ, ಯೋಗ ವಿಜ್ಞಾನ, ಜೀವ ವಿಜ್ಞಾನ, ಗಣಿತ ಶಾಸ್ತ್ರ, ಸೂಕ್ಷ್ಮಜೀವಶಾಸ್ತ್ರ, ಭೌತಶಾಸ್ತ್ರ, ಮನ:ಶಾಸ್ತ್ರ, ಸಂಖ್ಯಾಶಾಸ್ತ್ರ, ಪ್ರಾಣಿಶಾಸ್ತ್ರ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, (ಎಂ.ಎಲ್.ಐ.ಎಸ್.ಸಿ (ಮೊದಲ ಎರಡು ಸೆಮಿಸ್ಟರ್‍ಗಳನ್ನು ಪೂರೈಸ ಬಯಸಿದಲ್ಲಿ ಸ್ನಾತಕ ಪದವಿಯೊಂದಿಗೆ ನಿರ್ಗಮಿಸಬಹುದು).

ಸ್ವ ಹಣಕಾಸು ಕೋರ್ಸುಗಳು, ಎಂ.ಎಸ್ಸಿ.-ಫಿಲ್ಮ್ ಮೇಕಿಂಗ್, ವಿಧಿ ವಿಜ್ಞಾನ, ಗ್ರಾಫಿಕ್ಸ್ ಮತ್ತು ಅನಿಮೇಷನ್, ನೈಸರ್ಗಿಕ ವಿಪತ್ತು ನಿರ್ವಹಣೆ, ಘನತ್ಯಾಜ್ಯನಿರ್ವಹಣೆ,ಭೌಗೋಳಿಕ ಮಾಹಿತಿ ವಿಜ್ಞಾನ, ಅಣುಜೀವ ವಿಜ್ಞಾನ ಮತ್ತು ಮನ:ಶಾಸ್ತ್ರ ಸಮಾಲೋಚನೆ, ಎಂ.ಕಾಂ (ಎಫ್.ಎ.), ಎಂ.ಕಾಂ (ಐ.ಬಿ.) ಮತ್ತು ಎಂ.ಟಿ.ಟಿ.ಎಂ. ವಾಣಿಜ್ಯ ನಿಕಾಯದಲ್ಲಿ ಎಂ.ಕಾಂ. ಹಾಗೂ ಶಿಕ್ಷಣ ನಿಕಾಯದಲ್ಲಿ ಎಂ.ಎಡ್. ಕೋರ್ಸುಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಮೊದಲೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಹಿಂದಿನ ಅಧಿಸೂಚನೆಗೆ ವಿರುದ್ದವಾಗಿ ಈಗಾಗಲೇ ಅರ್ಜಿ ಸಲ್ಲಿಸಿದ ಮತ್ತು ಕೌನ್ಸೆಲಿಂಗ್‍ಗೆ ಹಾಜರಾಗದ, ಮೊದಲೇ ಸೀಟುಗಳನ್ನು ನೀಡದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

See also  ಬೆಳ್ತಂಗಡಿ: ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು