ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಇತಿಹಾಸ ವಸ್ತುಸಂಗ್ರಹಾಲಯ ಮತ್ತು ರಾಜ್ಯ ಪತ್ರಗಾರ ಇಲಾಖೆ ಸಹಯೋಗದಲ್ಲಿ ಎರಡು ದಿನಗಳ ಚಾರಿತ್ರಿಕ ದಾಖಲೆಗಳು ಮತ್ತು ಛಾಯಚಿತ್ರಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಈ ಪ್ರದರ್ಶನವನ್ನು ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾದ ಎನ್. ಮಹೇಶ್ ಬಾಬು ರವರು ಉದ್ಘಾಟಿಸಿದರು. ಮೈಸೂರು ಸಂಸ್ಥಾನ ಸರ್ಕಾರದ ಆದೇಶಗಳು, ಪತ್ರವ್ಯವಹಾರಗಳು ಸುತ್ತೊಲೆಗಳು, ಮೈಸೂರು ಮಹಾರಾಜರ ಮತ್ತು ದಿವಾನರ ಛಾಯಚಿತ್ರಗಳು, ಮೈಸೂರು ದಸರ ಉತ್ಸವದ ಚಿತ್ರಗಳು, ಅರಮನೆ ಕಟ್ಟಡದ ಛಾಯಚಿತ್ರಗಳು, ಆಹ್ವಾನ ಪತ್ರಗಳು, ಮೈಸೂರು ಸಂಸ್ಥಾನದ ಮುಖ್ಯಮಂತ್ರಿಗಳು ಮತ್ತು ಕರ್ನಾಟಕದ ಮುಖ್ಯಮಂತ್ರಿಗಳ ಛಾಯಚಿತ್ರಗಳು, ಅಂದಿನ ದಿನಪತ್ರಿಕೆಗಳಾದ ಸಾದ್ವಿ, ನವಜೀವನ, ವಿಜಯ ಪತ್ರಿಕೆಗಳ ಪ್ರತಿಗಳನ್ನು ಹೀಗೆ 120 ಕ್ಕೂ ಹೆಚ್ಚಿನ ದಾಖಲೆಗಳು ಮತ್ತು ಛಾಯಚಿತ್ರಗಳನ್ನು ಪ್ರದರ್ಶಿಸಲಾಯಿತು.
ಮೊದಲನೆಯ ದಿನ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ವಿಶ್ವವಿದ್ಯಾಲಯದ ಸಿಬ್ಬಂದಿಯವರು ಮತ್ತು ಸಾರ್ವಜನಿಕರು ಸೇರಿದಂತೆ 1000 ಕ್ಕೂ ಹೆಚ್ಚು ಜನರು ಈ ಪ್ರದರ್ಶನವನ್ನು ವಿಕ್ಷೀಸಿ ಚಾರಿತ್ರಿಕ ದಾಖಲೆಗಳ ಮಾಹಿತಿಯನ್ನು ಪಡೆದರು.
ಈ ಸಂದರ್ಭದಲ್ಲಿ ರಾಜ್ಯಪತ್ರಗಾರ ಇಲಾಖೆ ನಿರ್ದೇಶಕರಾದ ಡಾ. ಗವಿಸಿದ್ದಯ್ಯ, ಉಪನಿರ್ದೇಶಕರಾದ ಮಹೇಶ್, ಇತಿಹಾಸ ವಸ್ತು ಸಂಗ್ರಹಾಲಯದ ಸಂಯೋಜಕರಾದ ಪ್ರೊ.ಎಸ್. ನಾಗರತ್ನಮ್ಮ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ ಕೆ.ಎಸ್. ವಿಜಯಲಕ್ಷ್ಮಿ, ಪ್ರಾಧ್ಯಾಪಕರುಗಳಾದ ಪ್ರೊ. ಷೇಕ್ ಮಸ್ತಾನ್, ಪ್ರೊ.ಎಂ.ವಿ ಉಷಾದೇವಿ, ಪ್ರೊ ಎಂ.ಶಶಿಧರ್ ರವರು ಹಾಗೂ ಸಂಶೋಧನಾ ಮತ್ತು ಸ್ನಾತಕ್ಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.