News Kannada
Friday, February 03 2023

ಬೆಂಗಳೂರು

ಬೆಂಗಳೂರು: ರಿಯಲ್ ಎಸ್ಟೇಟ್ ಎಕ್ಸೋಪೋ ಮತ್ತು ಸಮಾವೇಶ ಆಯೋಜನೆ

Bengaluru: Real Estate Expo and Conference to be held
Photo Credit : By Author

ಬೆಂಗಳೂರು: ಜಿತೋ ಕೆಕೆಜಿ ವಲಯದ ಮಾರ್ಗದರ್ಶನದಲ್ಲಿ ಜಿತೋ ಬೆಂಗಳೂರು ನಾರ್ಥ್ ಚಾಪ್ಟರ್ ನಿಂದ ಜ. 14 ಮತ್ತು 15 ರಂದು ಹೊಟೇಲ್ ಲಲಿತ್ ಅಶೋಕದಲ್ಲಿ ರಾಷ್ಟ್ರಮಟ್ಟದ ಬೃಹತ್ ರಿಯಲ್ ಎಸ್ಟೇಟ್ ಎಕ್ಸ್ ಪೋ ಮತ್ತು ಸಮಾವೇಶ ಆಯೋಜಿಸಿದೆ ಎಂದು ಜಿತೋ ಬೆಂಗಳೂರು ನಾರ್ಥ್ ವಿಭಾಗದ ಅಧ್ಯಕ್ಷ ಇಂದರ್ ಚಂದ್ ಬೊಹ್ರಾ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವೈಷ್ಣೋದೇವಿ ಗ್ರೂಪ್ ಆಫ್ ಅಸೋಸಿಯೇಷನ್ ಮತ್ತು ಆರ್.ಆರ್.ಬಿ.ಸಿ ಮತ್ತು ಸ್ವಾಮಿತ್ವ ಸಂಸ್ಥೆಗಳ ಸಹಯೋಗದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಎಸ್.ಎನ್.ಎನ್ ರಾಜ್ ಗ್ರೂಪ್ ಡವಲಪರ್ಸ್ ಅಂಡ್ ಪ್ರಮೋಟರ್ಸ್ ಮೊದಲ ಬಾರಿಗೆ ಬೃಹತ್ ಸಮ್ಮೇಳನದಲ್ಲಿ ಭಾಗಿಯಾಗುತ್ತಿದೆ ಎಂದರು.

ನಗರಗಳು ತ್ವರಿತವಾಗಿ ಬೆಳವಣಿಗೆ ಕಾಣುತ್ತಿದ್ದು, ವ್ಯವಹಾರದ ಅವಕಾಶಗಳು ಹೆಚ್ಚಾಗುತ್ತಿವೆ. ಆದರೆ ಸೂಕ್ತ ಸಂಪರ್ಕ ವೇದಿಕೆಗಳಿಲ್ಲದ ಕಾರಣ  ರಿಯಲ್ ಎಸ್ಟೇಟ್ ವ್ಯವಹಾರ ಹೆಚ್ಚಿನ ಪ್ರಗತಿ ಕಾಣುತ್ತಿಲ್ಲ. ಹೀಗಾಗಿ ರಿಯಲ್ ಎಸ್ಟೇಟ್ ಎಕ್ಸ್ ಪೋ ಗಾಗಿ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಎಕ್ಸ್ ಪೋ ಸಂಚಾಲಕ ಪ್ರವೀಣ್ ಶಾ ಮಾತನಾಡಿ, ರಾಜ್ಯದಾದ್ಯಂತ ಡೆವಲಪರ್ ಗಳು ಮತ್ತು ಪ್ರಮೋಟರ್  ವಲಯವನ್ನು ಬಲಪಡಿಸಲು ಮತ್ತು ಜೈನ್ ಸಮುದಾಯಕ್ಕೆ ರಿಯಲ್ ಎಸ್ಟೇಟ್ ಕುರಿತು ತಿಳಿವಳಿಕೆ ಮೂಡಿಸಲು ಮತ್ತು ಸಂಪರ್ಕ ಜಾಲವನ್ನು ವಿಸ್ತರಿಸಲು  ಕ್ರಮ ಕೈಗೊಳ್ಳಲಾಗುತ್ತಿದೆ.  ವಿಶೇಷವಾಗಿ ಜೈನ ಸಮುದಾಯದ ನಡುವೆ ಉತ್ತಮ ವ್ಯಾಪಾರ ವಹಿವಾಟು ನಡೆಯುವಂತೆ ನೋಡಿಕೊಳ್ಳುವ ಉದ್ದೇಶವನ್ನು ಎಕ್ಸ್ ಪೋ ಹೊಂದಿದೆ ಎಂದರು.

ಜಿತೋ ಕೆಕೆಜಿ ವಲಯದ ಅಧ್ಯಕ್ಷ ಅಶೋಕ್ ಸಲೆಚಾ ಮಾತನಾಡಿ, ಇದೇ ಮೊದಲ ಬಾರಿಗೆ ವಲಯವಾರು ಸಮಾವೇಶ ಆಯೋಜಿಸುತ್ತಿದ್ದು,  ಬೆಂಗಳೂರು ದಕ್ಷಿಣ, ಮೈಸೂರು, ದಾವಣಗೆರೆ, ಹುಬ್ಬಳ್ಳಿ, ಹೊಸಪೇಟೆ, ಬಳ್ಳಾರಿ, ಬೆಳಗಾವಿ, ವಿಜಯಪುರ ವಲಯದಿಂದಲೂ ಸಹ ಹೆಚ್ಚಿನ ಪ್ರಮಾಣದಲ್ಲಿ ಜೈನ ಸಮುದಾಯದವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

See also  ಬೆಂಗಳೂರು : ಸಿಲಿಂಡರ್ ಸ್ಫೋಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು