ಬೆಂಗಳೂರು: ಬಿಜೆಪಿಯಲ್ಲಿ ಬಿಎಸ್‌ವೈ ಅವರಿಗೆ ಕೆಲಸ ಮಾಡಲು ಸಂತೋಷ ಕೂಟ (ಬಿ.ಎಲ್. ಸಂತೋಷ್, ಕೆ.ಎಸ್. ಈಶ್ವರಪ್ಪ, ಸಿ.ಟಿ. ರವಿ) ಬಿಡುತ್ತಿಲ್ಲ. ಲಿಂಗಾಯಿತ ಮತಕ್ಕಾಗಿ ಯಡಿಯೂರಪ್ಪ ಅವರನ್ನೇ ನೆಚ್ಚಿಕೊಂಡಿರುವ ಬಿ.ಎಲ್. ಸಂತೋಷ್ ಅವರ ಕೂಟಕ್ಕೆ ಬಿಎಸ್‌ವೈ ಅವರ ಶ್ರಮ ಬೇಕು. ಆದರೆ ಬಿಎಸ್‌ವೈ ಅವರಿಗೆ ಅಧಿಕಾರ ಕೊಡಬಾರದು ಎಂಬ ಷಡ್ಯಂತ್ರ ತಂತ್ರವಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಛಾಟಿ ಬೀಸಿದೆ.
ಸರಣಿ ಟ್ವೀಟ್ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಟಾಂಗ್ ನೀಡಿರುವ ಕಾಂಗ್ರೆಸ್ ‘ಮುಖ್ಯಮಂತ್ರಿ’ಯಾಗುವ ಕನಸು ಕಾಣುತ್ತಿರುವ ಆ ‘ಸಂತೋಷ’ಕ್ಕೆ ಈಗ ಜನರ ಎದುರು ಬಂದು ಚುನಾವಣೆ ಎದುರಿಸುವ ಧೈರ್ಯ ಯಾಕಿಲ್ಲ? ಎಂದು ಪ್ರಶ್ನಿಸಿದೆ.
ಸರಣಿ ಟ್ವೀಟ್‌ನ ವಿವರ ಹೀಗಿದೆ
ಅಧಿಕಾರದಲ್ಲಿ ಇದ್ದಾಗಲೆಲ್ಲ ಕಿರುಕುಳ ಕೊಟ್ಟು ಕೊನೆಗೆ ಅಧಿಕಾರದಿಂದ ಕೆಳಗಿಳಿಸಿದ ‘ಸಂತೋಷ ಕೂಟ’ ಈಗ ಮತ್ತೆ ಅಧಿಕಾರಕ್ಕೆ ಬರಲು ಯಡಿಯೂರಪ್ಪರನ್ನೇ ಮುಂದೆ ಬಿಟ್ಟು ಮರೆಯಲ್ಲಿ ಕುಳಿತಿರುವುದೇಕೆ? ‘ಮುಖ್ಯಮಂತ್ರಿ’ಯಾಗುವ ಕನಸು ಕಾಣುತ್ತಿರುವ ಆ ‘ಸಂತೋಷ’ಕ್ಕೆ ಈಗ ಜನರ ಎದುರು ಬಂದು ಚುನಾವಣೆ ಎದುರಿಸುವ ಧೈರ್ಯ ಯಾಕಿಲ್ಲ? ಎಂದು ಪ್ರಶ್ನಿಸಿದೆ. ಮೊತ್ತೊಂದು ಟ್ವೀಟ್‌ನಲ್ಲಿಆಪರೇಷನ್ ಕಮಲ’ ದ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಯಡಿಯೂರಪ್ಪಗೆ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅವಕಾಶ ನೀಡಲಿಲ್ಲ. ರಾಜ್ಯ ಪ್ರವಾಹಕ್ಕೆ ತುತ್ತಾಗಿ ಯಡಿಯೂರಪ್ಪ ಏಕಾಂಗಿಯಾಗಿ ರಾಜ್ಯ ಸುತ್ತಬೇಕಾಯ್ತು. ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಯಾಗಿರುವ ‘ಸಂತೋಷ ಕೂಟ’ ಇದಕ್ಕೆ ಅಡ್ಡಿಯಾಗಿ ನಿಂತಿತ್ತು ಎಂದು ವಿವರಿಸಿದೆ.
ಮುಂದುವರಿದು ಬಿಜೆಪಿಯಲ್ಲಿನ ಏಕೈಕ ಜನಪ್ರಿಯ ನಾಯಕ ಯಡಿಯೂರಪ್ಪ. ಪಕ್ಷವನ್ನು ಅಧಿಕಾರಕ್ಕೆ ತಂದ ಬಳಿಕ ಅವರಿಂದ ಪಕ್ಷದ ಹಿಡಿತ ಸಡಿಲಿಸಿ ಹಿಂಬಾಗಿಲ ಮೂಲಕ ‘ಆರೆಸ್ಸೆಸ್’ ಹೆಸರಲ್ಲಿ ಅನಾಯಾಸವಾಗಿ ಅಧಿಕಾರ ಚಲಾಯಿಸಲು ಯತ್ನಿಸಿದ್ದು ಇದೇ ‘ಸಂತೋಷ ಕೂಟ” ಎಂದು ಟ್ವೀಟ್ ಮಾಡಿದೆ.
ಅಧಿಕಾರದಲ್ಲಿ ಇದ್ದಾಗಲೆಲ್ಲ ಕಿರುಕುಳ ಕೊಟ್ಟು ಕೊನೆಗೆ ಅಧಿಕಾರದಿಂದ ಕೆಳಗಿಳಿಸಿದ ‘ಸಂತೋಷ ಕೂಟ’ ಈಗ ಮತ್ತೆ ಅಧಿಕಾರಕ್ಕೆ ಬರಲು ಯಡಿಯೂರಪ್ಪರನ್ನೇ ಮುಂದೆ ಬಿಟ್ಟು ಮರೆಯಲ್ಲಿ ಕುಳಿತಿರುವುದೇಕೆ?
‘ಮುಖ್ಯಮಂತ್ರಿ’ಯಾಗುವ ಕನಸು ಕಾಣುತ್ತಿರುವ ಆ ‘ಸಂತೋಷ’ಕ್ಕೆ ಈಗ ಜನರ ಎದುರು ಬಂದು ಚುನಾವಣೆ ಎದುರಿಸುವ ಧೈರ್ಯ ಯಾಕಿಲ್ಲ?#BSYvsBJP pic.twitter.com/y7ukhKx6Xf
— Karnataka Congress (@INCKarnataka) March 18, 2023