
ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಮನೆಯ ಮೇಲೆ ಬೆಂಗಳೂರು ಕೇಂದ್ರ ಅಪರಾಧ ಶಾಖೆ (ಸಿಸಿಬಿ) ದಾಳಿ ನಡೆಸಿದೆ.
ವಿವೇಕ್ ಅವರ ಸಂಬಂಧಿಯಾಗಿರುವ ಆದಿತ್ಯ ಅಳ್ವ ಬೆಂಗಳೂರು ಡ್ರಗ್ಸ್ ಪ್ರಕರಣದ ಆರೋಪಿ. ಆತನನ್ನು ಹುಡುಕಿಕೊಂಡು ಪೊಲೀಸರು ವಿವೇಕ್ ಅವರ ಮುಂಬೈ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.
ಆದಿತ್ಯ ವಿರುದ್ಧ ಪ್ರಕರಣ ದಾಖಲಾದಾಗಿನಿಂದ ಆತ ತಲೆಮರೆಸಿಕೊಂಡಿದ್ದಾನೆ. ಇಂದು ಸಿಸಿಬಿ ನ್ಯಾಯಾಲಯದ ವಾರಂಟ್‌ನೊಂದಿಗೆ ವಿವೇಕ್ ಅವರ ಮನೆಯಲ್ಲಿ ಹುಡುಕಾಟ ನಡೆಸಿದೆ.
ಸಿಸಿಬಿ ಹೊರಡಿಸಿದ ಹೇಳಿಕೆಯ ಪ್ರಕಾರ, ಕಾಟನ್‌ಪೇಟೆ ಡ್ರಗ್ಸ್ ಪ್ರಕರಣದಲ್ಲಿ ಆದಿತ್ಯ ಆಳ್ವಾ ಬೇಕಾಗಿದ್ದು ಆತ ತಲೆಮರೆಸಿಕೊಂಡಿದ್ದಾನೆ. ವಿವೇಕ್ ಒಬೆರಾಯ್ ಅವರ ಸಂಬಂಧಿಯಾಗಿರುವ ಆಳ್ವಾಗೆ ಆಶ್ರಯ ನೀಡಿದ್ದಾರೆಂಬ ಮಾಹಿತಿ ಇದ್ದು, ಅದಕ್ಕಾಗಿ ನಾವು ಒಬೆರಾಯ್ ಅವರ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಇದಕ್ಕಾಗಿ ನ್ಯಾಯಾಲಯದಿಂದ ವಾರಂಟ್ ತೆಗೆದುಕೊಂಡು ಸಿಸಿಬಿ ತಂಡ ಮುಂಬೈನ ಅವರ ಮನೆಗೆ ತೆರಳಿದೆ.
ಡ್ರಗ್ಸ್ ಪರೀಕ್ಷೆಯ ಸಮಯದಲ್ಲಿ ರಾಗಿಣಿ ಮೂತ್ರದಲ್ಲಿ ನೀರನ್ನು ಬೆರೆಸಿ ಮಾದರಿಯನ್ನು ಹಾಳು ಮಾಡಲು ಪ್ರಯತ್ನಿಸಿದರು. ಆ ಸಮಯ ಪೋಲೀಸರು ಮತ್ತೆ ಅವರ ಸ್ಯಾಂಪಲ್ ತೆಗೆದುಕೊಂಡಿದ್ದರು.