
ಬೆಂಗಳೂರು: ಪಾಕಿಸ್ತಾನ ಜಿಂದಾಬಾದ್ ಎಂದು ಬರೆದು ವಾಟ್ಸ್ ಗ್ರೂಪ್ ಗೆ ಹಾಕಿದ್ದ ಮೂವರಿಗೆ ಜಾಮೀನು ನೀಡಲು ಹೈಕೋರ್ಟ್ ನ ಏಕಸದಸ್ಯ ಪೀಠವು ನಿರಾಕರಿಸಿದೆ.
ನ್ಯಾಯಮೂರ್ತಿ ಸುಧೀಂದ್ರ ರಾವ್ ಅವರನ್ನು ಒಳಗೊಂಡಿರುವ ಏಕಸದಸ್ಯ ಪೀಠವು ಈ ತೀರ್ಪನ್ನು ನೀಡಿದೆ. ಸಂದೇಶ ಸಣ್ಣದಾಗಿದ್ದರೂ ಅದರ ಪರಿಣಾಮ ತೀವ್ರ ಸ್ವರೂಪದ್ದಾಗಿದೆ ಎಂದು ಪೀಠವು ಹೇಳಿದೆ.
ಆ.14ರಂದು ವಾಟ್ಸಾಪ್ ಗ್ರೂಪ್ ನಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಸಂದೇಶವನ್ನು ಹಾಕಿದ್ದ ಪ್ರಕರಣದ ಮೇಲೆ ಮುಸ್ತಫಾ, ಶಬ್ಬೀರ್ ಮತ್ತು ಚಾಂದ್ ಪಾಷಾ ಎಂಬವರನ್ನು ಕೊಪ್ಪಳ ಪೊಲೀಸರು ಬಂಧಿಸಿದ್ದರು.
ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಈ ಮೂವರು ಜೈಲು ಶಿಕ್ಷೆ ಅನುಭವಿಸಬೇಕು.